ಪ್ರಭಾಸ್ ಬಳಿಕ ಪ್ರಶಾಂತ್ ನೀಲ್ ಮುಂದಿನ ಸಿನಿಮಾ ಈ ಸ್ಟಾರ್ ಜೊತೆಗೆ?!

ಬುಧವಾರ, 10 ಮಾರ್ಚ್ 2021 (09:22 IST)
ಹೈದರಾಬಾದ್: ಕೆಜಿಎಫ್, ಉಗ್ರಂ ಸಿನಿಮಾ ಮೂಲಕ ಕನ್ನಡ ನಿರ್ದೇಶಕ ಪ್ರಶಾಂತ್ ನೀಲ್ ಈಗ ಬೇರೆ ಭಾಷೆಯವರ ಗಮನ ಸೆಳೆಯುತ್ತಿದ್ದಾರೆ. ಪ್ರಭಾಸ್ ಜೊತೆಗೆ ಸಲಾರ್ ಎಂಬ ಪ್ಯಾನ್ ಇಂಡಿಯಾ ಸಿನಿಮಾ ಮಾಡುತ್ತಿರುವ ಪ್ರಶಾಂತ್ ಇದಾದ ಬಳಿಕ ತೆಲುಗು ಸ್ಟಾರ್ ನಟ ಅಲ್ಲು ಅರ್ಜುನ್ ಜೊತೆಗೆ ಸಿನಿಮಾ ಮಾಡಲಿದ್ದಾರೆಯೇ?


ನಿನ್ನೆ ಹೈದರಾಬಾದ್ ನಲ್ಲಿ ಪ್ರಶಾಂತ್ ನೀಲ್ ಭೇಟಿ ಮಾಡಿರುವ ಅಲ್ಲು ಅರ್ಜುನ್ ಹೊಸ ಸ್ಕ್ರಿಪ್ಟ್ ಒಂದರ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಹೈದರಾಬಾದ್ ನ ಗೀತಾ ಆರ್ಟ್ಸ್ ಕಚೇರಿಯಲ್ಲಿ ಅಲ್ಲು ಅರ್ಜುನ್ ಪ್ರಶಾಂತ್ ನೀಲ್ ರನ್ನು ಭೇಟಿ ಮಾಡಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.

ಇಬ್ಬರೂ ಮುಂದೆ ಜೊತೆಯಾಗಿ ಸಿನಿಮಾ ಮಾಡಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ. ಗೀತಾ ಆರ್ಟ್ಸ್ ಅಲ್ಲು ಅರ್ಜುನ್ ಅವರ ತಂದೆ ಅಲ್ಲು ಅರವಿಂದ್ ಒಡೆತನದ ನಿರ್ಮಾಣ ಸಂಸ್ಥೆಯಾಗಿದೆ. ಇಲ್ಲಿಯೇ ಇಬ್ಬರೂ ಭೇಟಿಯಾಗಿರುವುದು ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ