ಮೈಸೂರು ಮೃಗಾಲಯಕ್ಕೆ ಅಮೂಲ್ಯ ಮಕ್ಕಳ ಮೊದಲ ಭೇಟಿ, ನೆನಪಿಗಾಗಿ ಎರಡು ಪ್ರಾಣಿಗಳ ದತ್ತು

Sampriya

ಬುಧವಾರ, 25 ಡಿಸೆಂಬರ್ 2024 (17:31 IST)
Photo Courtesy X
ಮೈಸೂರು: ನಟಿ ಅಮೂಲ್ಯ  ಪತಿ ಜಗದೀಶ್  ಹಾಗೂ ಮಕ್ಕಳೊಂದಿಗೆ ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡಿ ಎರಡು ಪ್ರಾಣಿಗಳನ್ನು ದತ್ತು ಪಡೆದರು. ಮೈಸೂರು ಭೇಟಿಯ ಬಗ್ಗೆ ಜಗದೀಶ್ ಅವರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿ, ಬರೆದುಕೊಂಡಿದ್ದಾರೆ.  

ಮೈಸೂರು ಮೃಗಾಲಯಕ್ಕೆ ಅಥರ್ವ್, ಆದವ್ ಅವರ ಮೊದಲ ಭೇಟಿಯಿದೆ. ಮೈಸೂರು ಮೃಗಾಲಯ ಸುಂದರವಾಗಿದೆ. ಈ ವೇಳೆ ಬ್ಲ್ಯಾಕ್ ಪಂಥರ್ ಹಾಗೂ ಬಿಳಿ ನವಿಲನ್ನು ದತ್ತು ಪಡೆಯಲಾಯಿತು. ಇದು ಅವರಿಗೆ ಶಾಶ್ವತವಾದ ನೆನಪು ಎಂದರು.

ಈಚೆಗೆ ನಟಿ ಅಮೂಲ್ಯ ಅವರು ದಕ್ಷಿಣ ಕನ್ನಡದ ಹೆಸರಾಂತ ದೇವಸ್ಥಾನಗಳಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದರು. ಕಟೀಲು ಶ್ರೀ ದುರ್ಗಾಪರಮೇಶ್ವರಿ, ಕೊಲ್ಲೂರು ಶ್ರೀಮೂಕಾಂಬಿಕೆ, ಶೃಂಗೇರಿಗೆ ಭೇಟಿ ನೀಡಿದರು.

ಇದೀಗ ರಜೆ ದಿನವನ್ನು ಎಂಜಾಯ್ ಮಾಡಲು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದಾರೆ.




ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ