ಒಂದಾದ ‘ಲವ್ ಮಾಕ್ಟೇಲ್’ ನಾಯಕಿ ನಿಧಿಮಾ, ‘ದಿಯಾ’ ನಾಯಕ ಪೃಥ್ವಿ

ಶನಿವಾರ, 10 ಅಕ್ಟೋಬರ್ 2020 (09:54 IST)
ಬೆಂಗಳೂರು: ಲವ್ ಮಾಕ್ಟೇಲ್ ಮತ್ತು ದಿಯಾ ಸಿನಿಮಾ ಒಂದೇ ಸಮಯದಲ್ಲಿ ಬಿಡುಗಡೆಯಾಗಿ ಹೊಸ ಭರವಸೆ ಮೂಡಿಸಿದ ಸ್ಯಾಂಡಲ್ ವುಡ್ ಸಿನಿಮಾಗಳು. ಈಗ ಆ ಎರಡು ಸಿನಿಮಾಗಳ ನಾಯಕ, ನಾಯಕಿ ಹೊಸ ಸಿನಿಮಾದಲ್ಲಿ ಜತೆಯಾಗಿ ಅಭಿನಯಿಸಲಿದ್ದಾರೆ.


ಲವ್ ಮಾಕ್ಟೇಲ್ ನಾಯಕಿ ನಿಧಿಮಾ ಅಲಿಯಾಸ್ ಮಿಲನಾ ನಾಗರಾಜ್ ಹಾಗೂ ದಿಯಾ ನಾಯಕ ಆದಿ ಅಲಿಯಾಸ್ ಪೃಥ್ವಿ ಅಂಬರ್ ಹೊಸ ಸಿನಿಮಾವೊಂದರಲ್ಲಿ ಜೋಡಿಯಾಗಿದ್ದಾರೆ. ಈ ಸಿನಿಮಾಗೆ For Regn (ಫಾರ್ ರಿಜಿಸ್ಟ್ರೇಷನ್) ಎಂದು ಹೆಸರಿಡಲಾಗಿದೆ. ಈ ಸಿನಿಮಾವನ್ನು ನವೀನ್ ದ್ವಾರಕನಾಥ್ ನಿರ್ದೇಶಿಸಲಿದ್ದಾರೆ.  ಸದ್ಯದಲ್ಲೇ ಈ ಸಿನಿಮಾ ಸೆಟ್ಟೇರಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ