Prithwi Bhat marriage: ಸರಿಗಮಪ ಸಿಂಗರ್ ಪೃಥ್ವಿ ಭಟ್ ಮದುವೆ ವಿವಾದ: ಮನೆ ಬಿಟ್ಟು ಹೋಗಿದ್ದಕ್ಕೆ ಕಾರಣ ಹೇಳಿದ ಗಾಯಕಿ

Krishnaveni K

ಮಂಗಳವಾರ, 22 ಏಪ್ರಿಲ್ 2025 (09:41 IST)
ಬೆಂಗಳೂರು: ಮನೆ ಬಿಟ್ಟು ಹೋಗಿ ಮದುವೆಯಾಗಿದ್ದು ಯಾಕೆ ಎಂದು ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಕಾರಣ ನೀಡಿರುವ ಅಡಿಯೋವೊಂದು ಈಗ ವೈರಲ್ ಆಗಿದೆ.

ಸರಿಗಮಪ ಖ್ಯಾತಿಯ ಪೃಥ್ವಿ ಭಟ್ ಮನೆ ಬಿಟ್ಟು ಓಡಿ ಹೋಗಿ ಜೀ ಕನ್ನಡದ ಪ್ರೊಡಕ್ಷನ್ ವಿಭಾಗದಲ್ಲಿ ಕೆಲಸ ಮಾಡುವ ಅಭಿಷೇಕ್ ಎನ್ನುವವರನ್ನು ಮದುವೆಯಾಗಿದ್ದಾರೆ ಎಂದು ನಿನ್ನೆ ಭಾರೀ ಸುದ್ದಿಯಾಗಿತ್ತು. ಮಾರ್ಚ್ 27 ರಂದು ಪೃಥ್ವಿ ಮದುವೆಯಾಗಿತ್ತು. ಪೃಥ್ವಿ ತಂದೆಯವರು ಹವ್ಯಕ ಗ್ರೂಪ್ ನಲ್ಲಿ ಹಂಚಿಕೊಂಡ ಅಡಿಯೋ ವೈರಲ್ ಆಗಿತ್ತು.

ನರಹರಿ ದೀಕ್ಷಿತ್ ಎಂಬ ಸರಿಗಮಪ ಜ್ಯೂರಿ ಪೃಥ್ವಿ ವಶೀಕರಣ ಮಾಡಿದ್ದಾರೆ ಈ ಕೆಲಸ ಮಾಡಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದರು. ತಮಗೇ ಗೊತ್ತಿಲ್ಲದ ಹಾಗೆ ಮಗಳು ಮದುವೆಯಾಗಿದ್ದಾಳೆ. ಅಭಿಷೇಕ್ ಎಂಬಾತನ ಬಗ್ಗೆ ನಮಗೆ ಗೊತ್ತಾದಾಗ ಆಕೆಯನ್ನು ಕೇಳಿದ್ದೆವು. ಆದರೆ ನಿಮ್ಮ ಒಪ್ಪಿಗೆಯಿಲ್ಲದೇ ಮದುವೆಯಾಗಲ್ಲ ಎಂದಿದ್ದಳು ಎಂದು ತಂದೆ ಆರೋಪಿಸಿದ್ದರು.

ಇದೀಗ ಸ್ವತಃ ಪೃಥ್ವಿ ಭಟ್ ತಂದೆಯ ಆರೋಪಗಳಿಗೆ ಸ್ಪಷ್ಟನೆ ಮತ್ತು ಕ್ಷಮೆ ಕೇಳಿರುವ ಮತ್ತೊಂದು ಅಡಿಯೋ ವೈರಲ್ ಆಗಿದೆ. ‘ಹಾಯ್ ಅಪ್ಪಾ ಸಾರಿ. ಈಗಾಗಲೇ ಎರಡು ದಿನಗಳಿಂದ ಹವ್ಯಕ ಗ್ರೂಪ್ ಮತ್ತು ಇತರೆ ಗ್ರೂಪ್ ಗಳಲ್ಲಿ ನರಹರಿ ದೀಕ್ಷಿತ್ ಬಗ್ಗೆ ಮತ್ತು ನನ್ನ ಬಗ್ಗೆ ಅಡಿಯೋ ಮೆಸೇಜ್ ಗಳನ್ನು ಕಳುಹಿಸುತ್ತಿದ್ದೀರಿ. ಆದರೆ ಈ ವಿಷಯದಲ್ಲಿ ನರಹರಿ ದೀಕ್ಷಿತ್ ಸರ್ ನದ್ದು ಏನೂ ತಪ್ಪಿಲ್ಲ. ನೀವೇ ಹೇಳಿದ ಹಾಗೆ ಮಾರ್ಚ್ 7 ರಂದು ನರಹರಿ ದೀಕ್ಷಿತ್ ಸರ್ ಮನೆಗೆ ಬಂದಿದ್ದರು. ಈ ವಿಚಾರದ ಬಗ್ಗೆ ಮಾತನಾಡಿದ್ದರು. ಆಗ ನಾನು ಅವರ ಎದುರು ಮತ್ತು ನಿಮ್ಮ ಎದುರೇ ಅಭಿ ನನಗೆ ಇಷ್ಟ ಎಂದೇ ಹೇಳಿದ್ದೆ.

ಆದರೆ ನಂತರ ನೀವು ಬೈದ ಕಾರಣ ಆಯ್ತು ಎಂದು ಒಪ್ಪಿದೆ ಬಿಟ್ಟರೆ ನನ್ನ ಮನಸ್ಸಿನಲ್ಲಿ ಆಗಲೂ ಅಭಿಯೇ ಇದ್ದರು. ನಂತರ ನೀವು ತುಂಬಾ ರಿಸ್ಟ್ರಿಕ್ಷನ್ ಹಾಕಲು ಶುರು ಮಾಡಿದ್ರಿ. ಶೋಗಳನ್ನು ಒಪ್ಪಿಕೊಳ್ಳಬೇಡ, ಕಾರ್ಯಕ್ರಮ ನೀಡಬೇಡ ಎಂದು ಹೇಳಲು ಶುರು ಮಾಡಿದ್ರಿ. ಎಲ್ಲಾ ಕಡೆ ನೀವು ಬರ್ತಾ ಇದ್ರಿ. ಇದರಿಂದ ನನಗೆ ಭಯ ಶುರುವಾಯ್ತು. ಅದಕ್ಕೇ ನಾನು ಒಂದು ನಿರ್ಧಾರಕ್ಕೆ ಬಂದು ಮನೆ ಬಿಟ್ಟು ಬಂದೆ. ನೀವು ಮ್ಯೂಸಿಕ್ಕೇ ಬಿಡಬೇಕು ಎಂದು ಹೇಳಿದ್ದಕ್ಕೆ ಭಯಪಟ್ಟು ನಾನು ಹೊರಬಂದೆ.

ಅದು ಬಿಟ್ಟು ದೀಕ್ಷಿತ್ ಸರ್ ಗೂ ಇದಕ್ಕೂ ಸಂಬಂಧವಿಲ್ಲ. ಮದುವೆ ಆಗುವ ದಿನವೂ ದೀಕ್ಷಿತ್ ಸರ್ ಗೆ ಗೊತ್ತಿರಲಿಲ್ಲ. ನಾನು ಹೀಗೇ ಅವರನ್ನು ಕರೆ ಮಾಡಿ ಇಂತಹ ಜಾಗಕ್ಕೆ ಬನ್ನಿ ಎಂದು ಹೇಳಿದ್ದೆ. ಅವರು ಸಾಮಾನ್ಯವಾಗಿಯೇ ಬಂದಿದ್ದರು. ಆದರೆ ಅಲ್ಲಿ ಮದುವೆಯ ವಾತಾವರಣ ನೋಡಿ ನಾನು ರಿಕ್ವೆಸ್ಟ್ ಮಾಡಿದ್ದಕ್ಕೆ ನನಗೂ ಅಭಿ ಸರ್ ಗೂ ಆಶೀರ್ವಾದ ಮಾಡಿದರು. ಅದು ಬಿಟ್ಟರೆ ನರಹರಿ ದೀಕ್ಷಿತ್ ಸರ್ ಗೂ ನಮ್ಮ ಮದುವೆಗೂ ಯಾವುದೇ ಸಂಬಂಧವಿಲ್ಲ. ಅವರು ಯಾವುದೇ ತಪ್ಪು ಮಾಡಿಲ್ಲ. ಮೊದಲು ದೀಕ್ಷಿತ್ ಸರ್ ಮೇಲಿನ ಧ್ವೇಷ ಬಿಡಿ. ಖಂಡಿತಾ ನಾನು ಮಾಡಿದ್ದು ತಪ್ಪು. ಇದನ್ನು ನಾನು ಯಾವತ್ತೂ ಒಪ್ಪಿಕೊಳ್ಳುತ್ತೇನೆ. ಮರುದಿನವೇ ನಾನು ನಿಮಗೆ ಮೆಸೇಜ್ ಮಾಡಿ ನಾನು ಮಾಡಿದ್ದು ತಪ್ಪು ಎಂದು ಹೇಳಿದ್ದೆ. ಈಗಲೂ ಕೂಡಾ ನಾನು ನಿಮಗೆ ಕ್ಷಮೆಯನ್ನೇ ಕೇಳುತ್ತಿದ್ದೇನೆ, ಸಾಧ್ಯವಾದರೆ ಪ್ಲೀಸ್ ನಮ್ಮನ್ನು ಕ್ಷಮಿಸಿ.. ಸಾರಿ’ ಎಂದು ಪೃಥ್ವಿ ಹೇಳುತ್ತಿರುವ ಅಡಿಯೋ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ