ಬೆಂಗಳೂರು: ಜೀ ಕನ್ನಡ ಸರಿಗಮಪ ಖ್ಯಾತಿಯ ಗಾಯಕಿ ಪೃಥ್ವಿ ಭಟ್ ಮನೆಯವರನ್ನೂ ಲೆಕ್ಕಿಸದೇ ಮದುವೆಯಾಗಿದ್ದು, ಮಗಳ ಮದುವೆ ಬಗ್ಗೆ ಮನೆಯವರು ಗಂಭೀರ ಆರೋಪ ಮಾಡಿದ್ದಾರೆ.
ಗಡಿನಾಡು ಕಾಸರಗೋಡು ಮೂಲದವರಾದ ಪೃಥ್ವಿ ಭಟ್ ಜೀ ಕನ್ನಡದ ಸರಿಗಮಪ ರಿಯಾಲಿಟಿ ಶೋ ಮೂಲಕ ಬೆಳಕಿಗೆ ಬಂದ ಪ್ರತಿಭೆ. ಸಾಕಷ್ಟು ಸ್ಟೇಜ್ ಶೋ, ಕನ್ನಡ ಸಿನಿಮಾಗಳಿಗೂ ಹಾಡಿರುವ ಪೃಥ್ವಿ ಭಟ್ ಈಗ ದಿಡೀರ್ ಆಗಿ ಮದುವೆಯಾಗಿದ್ದಾರೆ.
ಅಭಿಷೇಕ್ ಎನ್ನುವ ಯುವಕನೊಂದಿಗೆ ಪೃಥ್ವಿ ಭಟ್ ದೇವಸ್ಥಾನವೊಂದರಲ್ಲಿ ಮದುವೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಮಗಳ ಮದುವೆ ವಿಚಾರ ತಿಳಿದು ಪೋಷಕರು ಆಘಾತ ವ್ಯಕ್ತಪಡಿಸಿದ್ದಾರೆ. ತಮ್ಮ ಮಾತನ್ನು ಧಿಕ್ಕರಿಸಿ ಮಗಳು ಮದುವೆಯಾಗಿದ್ದಾಳೆ. ಆ ಹುಡುಗನ ಜೊತೆ ಮದುವೆಯಾಗುವುದಿಲ್ಲ ಎಂದು ದೇವರ ಮುಂದೆ ನಿಂತು ಪ್ರಮಾಣ ಮಾಡಿದ್ದಳು.ಆದರೆ ಇದ್ದಕ್ಕಿದ್ದಂತೆ ಮನೆ ಬಿಟ್ಟು ಓಡಿ ಹೋಗಿದ್ದಾಳೆ. ಮಗಳ ಮೇಲೆ ವಶೀಕರಣ ವಿದ್ಯೆ ಪ್ರಯೋಗಿಸಲಾಗಿದೆ. ಇದರ ಹಿಂದೆ ಜೀ ಕನ್ನಡ ರಿಯಾಲಿಟಿ ಜ್ಯೂರಿ ನರಹರಿ ದೀಕ್ಷಿತ್ ಕೈವಾಡವಿದೆ ಎಂದು ಆರೋಪಿಸಿದ್ದಾರೆ.
ಅಭಿಷೇಕ್ ಕೂಡಾ ಜೀ ಕನ್ನಡದಲ್ಲಿ ನೌಕರ. ಮಾರ್ಚ್ 27 ರಂದು ಇಬ್ಬರ ಮದುವೆಯಾಗಿದೆ. ಮದುವೆಯಾಗಿ 20 ದಿನಗಳಾಗಿದೆ. ಇದುವರೆಗೆ ಅವಳಿಗೆ ನಮ್ಮನ್ನು ನೆನಪಾಗಲಿಲ್ಲ. ರೆಕಾರ್ಡಿಂಗ್ ಗೆ ಅಂತ ನಾನೇ ಸ್ಟುಡಿಯೋಗೆ ಬಿಟ್ಟು ಬಂದಿದ್ದೆ. ಆವತ್ತು ಮಧ್ಯಾಹ್ನ ಮೇಲೆ ನಮಗೆ ಪೊಲೀಸರು ಕಾಲ್ ಮಾಡಿ ಹೇಳಿದ್ರು ಪೃಥ್ವಿ ಭಟ್ ನಿಮ್ಮ ಮಗಳಾ? ಅವಳು ಹೀಗೆ ಅಭಿಷೇಕ್ ಎನ್ನುವವರನ್ನು ಮದುವೆಯಾಗಿ ಇಲ್ಲಿಗೆ ಬಂದಿದ್ದಾರೆ. ನಿಮ್ಮ ಮನೆಗೆ ಬರ್ತಾರಂತೆ ಅಂತ ಹೇಳಿದ್ರು. ಆಗ ನಾವು ಮನೆಗೆ ಬರುವುದು ಬೇಡ. ಇಲ್ಲಿಗೆ ಬಂದರೆ ಗಲಾಟೆಯಾಗುತ್ತದೆ ಎಂದೆವು, ಅದಾದ ಬಳಿಕ ಒಂದೆರಡು ಸಲ ಕಾಲ್ ಮಾಡಿ ಸಾರಿ ಅಪ್ಪ, ಅಮ್ಮ ಎಂದು ಹೇಳಿದ್ದಳು. ಅದರ ಬಿಟ್ಟರೆ ನಮ್ಮ ಸಂಪರ್ಕದಲ್ಲಿಲ್ಲ ಎಂದು ಪೃಥ್ವಿ ಭಟ್ ಹೇಳಿರುವ ಅಡಿಯೋ ಈಗ ವೈರಲ್ ಆಗಿದೆ.