ಕನ್ನಡದಲ್ಲೇ ಸಂದೇಶ ಬರೆದ ಮಲಯಾಳಿ ಬೆಡಗಿ ಪ್ರಿಯಾ ವಾರಿಯರ್

ಬುಧವಾರ, 1 ಏಪ್ರಿಲ್ 2020 (10:27 IST)
ಬೆಂಗಳೂರು: ಕನ್ನಡದಲ್ಲಿ ಇದೇ ಮೊದಲ ಬಾರಿಗೆ ಅಭಿನಯಿಸುತ್ತಿರುವ ಮಲಯಾಳಿ ಮೂಲದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್ ಕನ್ನಡಿಗರಿಗೆ ಕನ್ನಡ ಭಾಷೆಯಲ್ಲೇ ಸಂದೇಶ ಬರೆದಿದ್ದಾರೆ.


ಪ್ರಿಯಾ ವಾರಿಯರ್ ಮೊದಲ ಬಾರಿಗೆ ಕನ್ನಡದಲ್ಲಿ ಅಭಿನಯಿಸಿರುವ ‘ವಿಷ್ಣುಪ್ರಿಯ’ ಸಿನಿಮಾದ ಪೋಸ್ಟರ್ ಏಪ್ರಿಲ್ 5 ರಂದು ಅಂದರೆ ಭಾನುವಾರ ಬಿಡುಗಡೆಯಾಗುತ್ತಿದೆ. ಕೆ ಮಂಜು ನಿರ್ಮಾಣದಲ್ಲಿ ಮೂಡಿಬರುತ್ತಿರುವ ಈ ಸಿನಿಮಾದಲ್ಲಿ ಅವರ ಪುತ್ರ ಶ್ರೇಯಸ್ ಮಂಜು ನಾಯಕರಾಗಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಪ್ರಿಯಾ ವಾರಿಯರ್, ‘ನನ್ನ ಎಲ್ಲಾ ಕನ್ನಡದ ಅಭಿಮಾನಿಗಳಿಗೆ ಪ್ರಿಯ ಮಾಡುವ ನಮಸ್ಕಾರಗಳು. ನನ್ನ ಮೊದಲನೇ ಕನ್ನಡ ಸಿನಿಮಾ ವಿಷ್ಣು ಪ್ರಿಯ ಫಸ್ಟ್ ಲುಕ್ ಏಪ್ರಿಲ್ 5 ಕ್ಕೆ ಬಿಡುಗಡೆ ಆಗಲಿದೆ. ಎಲ್ಲರೂ ಶೇರ್ ಮಾಡಿ ಸಪೋರ್ಟ್ ಮಾಡಿ. ನಿಮ್ಮ ಪ್ರೀತಿ, ಆಶೀರ್ವಾದ ನನ್ನ ಮತ್ತು ಚಿತ್ರತಂಡದ ಮೇಲಿರಲಿ’ ಎಂದು ಕೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ