ಬೇರೆ ಸ್ಟಾರ್ ನಟರ ಅಭಿಮಾನಿ ಬಳಗವನ್ನೂ ಕೊಂಡಾಡಿದ ಕಿಚ್ಚ ಸುದೀಪ್

ಮಂಗಳವಾರ, 31 ಮಾರ್ಚ್ 2020 (09:33 IST)
ಬೆಂಗಳೂರು: ಕೊರೋನಾದಿಂದಾಗಿ ಲಾಕ್ ಡೌನ್ ಆದ ಮೇಲೆ ಹೊಟ್ಟೆಗೆ ಹಿಟ್ಟಿಲ್ಲದೇ ಪರದಾಡುತ್ತಿರುವ ಬಡವರು, ನಿರ್ಗತಿಕರಿಗೆ ಕಿಚ್ಚ ಸುದೀಪ್, ಡಿ ಬಾಸ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸ್ಟಾರ್ ನಟರ ಅಭಿಮಾನಿಗಳ ಬಳಗ ಉಚಿತ ಊಟ ವ್ಯವಸ್ಥೆ ಮಾಡುತ್ತಿದೆ.


ಈ ಬಗ್ಗೆ ತಮ್ಮ ಟ್ವಿಟರ್ ಪೇಜ್ ನಲ್ಲಿ ಬರೆದುಕೊಂಡಿರುವ ಕಿಚ್ಚ ಸುದೀಪ್ ಕೇವಲ ತಮ್ಮ ಅಭಿಮಾನಿಗಳ ಬಳಗ ಮಾತ್ರವಲ್ಲದೆ ಬೇರೆ ಸ್ಟಾರ್ ನಟರ ಅಭಿಮಾನಿ ಸಂಘಗಳ ಶ್ರಮವನ್ನೂ ಕೊಂಡಾಡಿದ್ದಾರೆ.

ಬೀದಿ ನಾಯಿಗಳಿಗೂ ತಮ್ಮ ಅಭಿಮಾನಿ ಬಳಗದವರು ಉಣಬಡಿಸುತ್ತಿರುವುದನ್ನು ಮೆಚ್ಚಿದ ಕಿಚ್ಚ ಇದು ನಿಜಕ್ಕೂ ಮಾನವೀಯತೆ ಎಂದು ಕೊಂಡಾಡಿದ್ದಾರೆ. ಅಲ್ಲದೆ, ಬೇರೆ ಸ್ಟಾರ್ ನಟರ ಅಭಿಮಾನಿಗಳೂ ಈ ರೀತಿ ಅನ್ನ ನೀಡುವ ಕೆಲಸದಲ್ಲಿ ನಿರತರಾಗಿರುವುದು ನಿಜಕ್ಕೂ ಮೆಚ್ಚುಗೆಗೆ ಅರ್ಹವಾಗಿದೆ ಎಂದು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ