ಕ್ರೇಜಿ ಕ್ವೀನ್ ರಕ್ಷಿತಾಗೆ ಬರ್ತಡೇ: ಪತ್ನಿಗಾಗಿ ಕೇಕ್ ತಯಾರಿಸಿದ ಪ್ರೇಮ್

ಮಂಗಳವಾರ, 31 ಮಾರ್ಚ್ 2020 (10:46 IST)
ಬೆಂಗಳೂರು: ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಗೆ ಇಂದು ಜನ್ಮ ದಿನದ ಸಂಭ್ರಮ. ದೇಶವಿಡೀ ಲಾಕ್ ಡೌನ್ ಆಗಿರುವುದರಿಂದ ಹುಟ್ಟುಹಬ್ಬದ ಪಾರ್ಟಿ ಮಾಡಲು ಸಾಧ‍್ಯವಾಗಿರಲಿಲ್ಲ.


ಆದರೆ ರಕ್ಷಿತಾಗೆ ಪತಿ ಪ್ರೇಮ್ ಸರ್ಪ್ರೈಸ್ ಕೊಟ್ಟಿದ್ದಾರೆ. ಗೆಳೆಯರ ಜತೆ ಸೇರಿ ಪಾರ್ಟಿ ಮಾಡಲು ಸಾಧ‍್ಯವಾಗದಿದ್ದರೂ ತಾವೇ ಕೈಯಾರೆ ಕೇಕ್ ತಯಾರಿಸಿ ಪುತ್ರನೊಂದಿಗೆ ಮಧ್ಯರಾತ್ರಿಯೇ ರಕ್ಷಿತಾ ಕೈಲಿ ಕೇಕ್ ಕಟ್ ಮಾಡಿಸಿದ್ದಾರೆ.

ಈ ಮೂಲಕ ಲಾಕ್ ಡೌನ್ ನಡುವೆಯೂ ಬರ್ತ್ ಡೇ ಸಂಭ್ರಮ ಕಳೆಗುಂದದಂತೆ ನೋಡಿದ್ದಾರೆ. ಕೊರೋನಾ ಎಲ್ಲಾ ಮುಗಿದ ಬಳಿಕ ಪಾರ್ಟಿ ಮಾಡಿ ಖುಷಿಪಡೋಣ ಎಂದು ರಕ್ಷಿತಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ