ಪುನೀತ್ ರಾಜಕುಮಾರ್ ಜೇಮ್ಸ್ ಗೆ ಮುಹೂರ್ತ ಫಿಕ್ಸ್

ಗುರುವಾರ, 9 ಜನವರಿ 2020 (09:34 IST)
ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಮುಂದಿನ ಸಿನಿಮಾ ‘ಜೇಮ್ಸ್’. ಈ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಲಿರುವ ಡೇಟ್ ಇದೀಗ ಫಿಕ್ಸ್ ಆಗಿದೆ.


ಯುವರತ್ನ ಸಿನಿಮಾ ಬಿಡುಗಡೆ ಹಂತದಲ್ಲಿದ್ದು, ಇದಾದ ಬಳಿಕ ಪುನೀತ್ ಜೇಮ್ಸ್ ನಲ್ಲಿ ಅಭಿನಯಿಸಲಿದ್ದಾರೆ. ಈ ಸಿನಿಮಾಗೆ ಜನವರಿ 19 ರಂದು ಮುಹೂರ್ತ ಕಾರ್ಯಕ್ರಮವಿದ್ದು, ಅದಾದ ಮರುದಿನದಿಂದಲೇ ಶೂಟಿಂಗ್ ಆರಂಭವಾಗಲಿದೆ.

‘ಬಹದ್ದೂರ್’ ಸಿನಿಮಾ ಖ್ಯಾತಿಯ ಚೇತನ್ ಕುಮಾರ್ ನಿರ್ದೇಶನದ ಸಿನಿಮಾ ಇದಾಗಿದ್ದು, ಪಕ್ಕಾ ಕಮರ್ಷಿಯಲ್ ಸಿನಿಮಾವಾಗಲಿದೆ. ಹೆಸರಿಗೆ ತಕ್ಕ ಹಾಗೆ ಪುನೀತ್ ಮೈನವಿರೇಳಿಸುವ ಸ್ಟಂಟ್ಸ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ