ಸದ್ಯದಲ್ಲೇ ಪುನೀತ್ ರಾಜಕುಮಾರ್ ಯುವರತ್ನ ಬಗ್ಗೆ ಸಿಹಿ ಸುದ್ದಿ

ಶನಿವಾರ, 16 ಮೇ 2020 (09:00 IST)
ಬೆಂಗಳೂರು: ಲಾಕ್ ಡೌನ್ ನಡುವೆಯೂ ರಾಜ್ಯ ಸರ್ಕಾರ ಸಿನಿಮಾಗಳ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಿಗೆ ಅನುಮತಿ ನೀಡಿದೆ. ಹೀಗಾಗಿ ಚಿತ್ರರಂಗದ ಚಟುವಟಿಕೆಗಳು ನಿಧಾನವಾಗಿ ಗರಿಗೆದರುತ್ತಿವೆ.

 

ಇದೀಗ ಪುನೀತ್ ರಾಜಕುಮಾರ್ ಅಭಿನಯದ ಸಂತೋಷ್ ಆನಂದ್ ರಾಮ್ ನಿರ್ದೇಶನದ ‘ಯುವರತ್ನ’ ಸಿನಿಮಾ ಕಡೆಯಿಂದ ಸುದ್ದಿಯೊಂದು ಬಂದಿದೆ.

ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಕೊರೋನಾ ಇಲ್ಲದೇ ಹೋಗಿದ್ದರೆ ಈಗಾಗಲೇ ಚಿತ್ರ ಬಿಡುಗಡೆ ಮಾಡುತ್ತಿತ್ತು. ಆದರೆ ಲಾಕ್ ಡೌನ್ ನಿಂದಾಗಿ ಕೆಲವು ಪೋಸ್ಟ್ ಪ್ರೊಡಕ್ಷನ್ ಕೆಲಸ ಮಾಡಲಾಗದೇ ಅಸಹಾಯಕವಾಗಿತ್ತು. ಇದೀಗ ಹೊಸ ಸುದ್ದಿ ಬಂದಿದ್ದು, ಸದ್ಯದಲ್ಲೇ ಯುವರತ್ನ ಹಾಡುಗಳನ್ನು ಒಂದೊಂದಾಗಿ ರಿಲೀಸ್ ಮಾಡಲಾಗುತ್ತದೆ ಎನ್ನಲಾಗಿದೆ. ತಮನ್ ಈ ಸಿನಿಮಾಗೆ ಸಂಗೀತ ಸಂಯೋಜಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ