ಪುನೀತ್ ಹುಟ್ಟುಹಬ್ಬಕ್ಕೆ ಅಪ್ಪು ಉತ್ಸವ

ಶುಕ್ರವಾರ, 17 ಮಾರ್ಚ್ 2023 (09:00 IST)
Photo Courtesy: Twitter
ಬೆಂಗಳೂರು: ಪುನೀತ್ ರಾಜ್ ಕುಮಾರ್ ನಮ್ಮನ್ನಗಲಿ ಒಂದೂವರೆ ವರ್ಷವೇ ಆಗಿದೆ. ಈ ನಡುವೆ ಅವರ ಎರಡನೇ ಹುಟ್ಟುಹಬ್ಬ ನಾಳೆ ಬರುತ್ತಿದೆ.

ಪುನೀತ್ ಇಲ್ಲದೇ ಅಭಿಮಾನಿಗಳು ಇದು ಎರಡನೇ ಬಾರಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ. ಪುನೀತ್ ಇಲ್ಲದೇ ಹೋದರೂ ಅವರ ಹುಟ್ಟುಹಬ್ಬವನ್ನು ಮಾತ್ರ ಅಭಿಮಾನಿಗಳು ವಿಶೇಷವಾಗಿ ಆಚರಿಸಿ ಈ ದಿನವನ್ನು ಸ್ಮರಣೀಯವಾಗಿಸುತ್ತಾರೆ.

ಈ ಬಾರಿ ಪುನೀತ್ ಹುಟ್ಟುಹಬ್ಬದಂದು ಅವರ ಸಮಾಧಿ ಇರುವ ಕಂಠೀರವ ಸ್ಟುಡಿಯೋದಲ್ಲಿ ಅಪ್ಪು ಉತ್ಸವ ನಡೆಯಲಿದೆ. ಬೆಳಿಗ್ಗೆ 10 ಗಂಟೆಯಿಂದ ದಿನವಿಡೀ ಅನ್ನದಾಸೋಹ ಕಾರ್ಯಕ್ರಮ ಏರ್ಪಡಿಸಲಾಗಿದೆ. ಅಲ್ಲದೆ ಸಮಾಧಿ ಸುತ್ತ ವಿದ್ಯುತ್ ದೀಪಾಲಂಕಾರ ಮಾಡಿ ಅಪ್ಪು ಉತ್ಸವ ಆಚರಿಸಲು ತೀರ್ಮಾನಿಸಲಾಗಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ