ದರ್ಶನ್ ಬಳಿಕ ಬಂಡೀಪುರಕ್ಕಾಗಿ ಪುನೀತ್ ರಾಜ್ ಕುಮಾರ್ ಮೊರೆ

ಸೋಮವಾರ, 25 ಫೆಬ್ರವರಿ 2019 (09:57 IST)
ಬೆಂಗಳೂರು: ಬಂಡೀಪುರ ಅರಣ್ಯ ವಲಯದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ನೂರಾರು ವನ್ಯ ಸಂಕುಲಗಳಿಗೆ ಅಪಾಯವಾಗಿರುವ ಹಿನ್ನಲೆಯಲ್ಲಿ ಚಿತ್ರನಟರು ಕಾಡಿನ ಉಳಿವಿಗಾಗಿ ಕರೆ ಕೊಟ್ಟಿದ್ದಾರೆ.


ಪ್ರಾಣಿ ಪ್ರಿಯರಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಿನ್ನೆಯೇ ಕಾಡ್ಗಿಚ್ಚಿನಿಂದ ವನ್ಯ ಜೀವಿಗಳನ್ನು ಸಂರಕ್ಷಿಸಲು ಸಹಾಯ ಮಾಡಲು ಮನಸ್ಸಿದ್ದರೆ ಕೈ ಜೋಡಿಸಿ ಎಂದು ಟ್ವಿಟರ್ ಮೂಲಕ ಮನವಿ ಮಾಡಿದ್ದರು.

ಇದೀಗ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕೂಡಾ ಅದೇ ಕೆಲಸ ಮಾಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅಪ್ಪು ‘ಬಂಡೀಪುರದಲ್ಲಿ ಉಂಟಾಗಿರುವ ಕಾಡ್ಗಿಚ್ಚಿನಿಂದ ಅರಣ್ಯ ಸಂಪತ್ತು ಮತ್ತು ವನ್ಯ ಜೀವಿಗಳು ಸಂಕಷ್ಟಕ್ಕೀಡಾಗಿವೆ. ಅರಣ್ಯ ಇಲಾಖೆ ಮತ್ತು ಸ್ವಯಂಸೇವಕರ ಜತೆ ನಾವೂ ಕೈ ಜೋಡಿಸೋಣ.  ‘ಕಾಡಿದ್ದರೆ ನಾಡು, ನಾವು’ ವನ್ಯ ಜೀವಿಗಳ ರಕ್ಷಣೆ ನಮ್ಮ ಹೊಣೆ. ಮನುಷ್ಯನ ಹಾಗೇ ಗಿಡ ಮರ ಮತ್ತು ವನ್ಯ ಜೀವಿಗಳೂ ಒಂದು ಜೀವವೇ’ ಎಂದು ಮನವಿ ಮಾಡಿದ್ದಾರೆ.

ಸದ್ಯಕ್ಕೆ ಬಂಡೀಪುರ ಅರಣ್ಯ ವಲಯದಲ್ಲಿ ಸ್ಥಿತಿ ಗತಿ ಗಂಭೀರವಾಗಿದ್ದು, ನೂರಾರು ವನ್ಯ ಜೀವಿಗಳು ಪ್ರಾಣ ಕಳೆದುಕೊಂಡಿವೆ. ಕೇರಳ ಗಡಿಭಾಗಕ್ಕೂ ಬೆಂಕಿ ವ್ಯಾಪಿಸಿದ್ದು, ಬೆಂಕಿ ನಂದಿಸಲು ಹರಸಾಹಸ ಮಾಡಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ