‘ಯಜಮಾನ’ ಪಟ್ಟಕ್ಕೆ ವಿಷ್ಣುವರ್ಧನ್ ಅವರೇ ಸೂಕ್ತ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತು
ಇದೀಗ ಅದಕ್ಕೆ ದರ್ಶನ್ ಸ್ಪಷ್ಟನೆ ಕೊಟ್ಟಿದ್ದು, ಯಾವತ್ತಿಗೂ ಕನ್ನಡ ಚಿತ್ರರಂಗಕ್ಕೆ ವಿಷ್ಣು ಸಾರ್ ಒಬ್ಬರೇ ಯಜಮಾನ. ಆ ಸಿನಿಮಾಗೂ ಈ ಸಿನಿಮಾಗೂ ಸಂಬಂಧವಿಲ್ಲ. ಕತೆಗೆ ಹೊಂದಿಕೆಯಾಗುವಂತೆ ಈ ಟೈಟಲ್ ಇಟ್ಟಿದ್ದೇವಷ್ಟೇ. ನಾನು ಇಲ್ಲಿ ಯಜಮಾನನಾಗಿ ಕಾಣಿಸಿಕೊಂಡಿಲ್ಲ. ಸಿನಿಮಾ ನೋಡಿದಾಗ ನಿಮಗೇ ಗೊತ್ತಾಗುತ್ತದೆ. ಇದರ ಹಿಂದೆ ಬೇರೆ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ.