ನಟ ದರ್ಶನ್ ತೆಗೆದ ಛಾಯಾಚಿತ್ರ ಪ್ರದರ್ಶನ; ಎಲ್ಲಿ ಗೊತ್ತಾ?

ಗುರುವಾರ, 21 ಫೆಬ್ರವರಿ 2019 (17:57 IST)
ನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕ್ಲಿಕ್ ಮಾಡಿರುವ ಫೋಟೋಗಳನ್ನು ನೋಡಲು ಅಭಿಮಾನಿಗಳಿಗೊಂದು ಅವಕಾಶ ಒದಗಿ ಬಂದಿದೆ.

ಚಾಲೆಂಜಿಂಗ್ ಸ್ಟಾರ್​ ದರ್ಶನ್​ ಪ್ರಾಣಿಪ್ರಿಯರು ಎಂಬುದು ಎಲ್ಲರಿಗೂ ಗೊತ್ತು.  ನಟ ದರ್ಶನ್​ ಒಳ್ಳೆಯ ಫೋಟೋಗ್ರಾಫರ್ ಆಗಿದ್ದಾರೆ. ಅರಣ್ಯ ಇಲಾಖೆ ಸಹಯೋಗದೊಂದಿಗೆ ಮೈಸೂರಿನಲ್ಲಿ ‘ಲೈಫ್ ಆನ್ ವೈಲ್ಡ್ ಸೈಡ್’ ಹೆಸರಿನ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಲಾಗಿದೆ.

ಮಾರ್ಚ್ 1, 2 ಹಾಗೂ 3 ರಂದು ಸಂದೇಶ್ ಪ್ರಿನ್ಸ್ ಹೊಟೇಲ್​ನಲ್ಲಿ ಚಿತ್ರನಟ ದರ್ಶನ್ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಮಾರ್ಚ್ 3 ರಂದು ವಿಶ್ವ ವನ್ಯ ಜೀವಿ ದಿನವಾಗಿದ್ದು, ದರ್ಶನ್ ಆ ದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ