ಕೊರೋನಾ ಜಾಗೃತಿಗೆ ಧ್ವನಿಗೂಡಿಸಿದ ಪುನೀತ್ ರಾಜಕುಮಾರ್

ಭಾನುವಾರ, 6 ಜೂನ್ 2021 (09:40 IST)
ಬೆಂಗಳೂರು: ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಫಿಕ್ಕಿ) ಕೈಗೊಂಡಿರುವ ಕೊರೋನಾ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ಪರವಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾಗಿಯಾಗಿದ್ದಾರೆ.


ಹಿಂದಿ, ತಮಿಳು, ತೆಲುಗು, ಮರಾಠಿ, ಪಂಜಾಬಿ, ಕನ್ನಡ ಭಾಷೆಗಳಲ್ಲಿ ವಿಡಿಯೋ ಸಂದೇಶದ ಮೂಲಕ ಕೊರೋನಾ ಕುರಿತು ಜಾಗೃತಿ ಮೂಡಿಸಲಾಗಿದೆ. ಆಯಾ ಭಾಷೆಗಳಲ್ಲಿ ಆಯಾ ಭಾಷೆಗಳ ಜನಪ್ರಿಯ ನಟರನ್ನು ಬಳಸಲಾಗಿದೆ.

ಈ ವಿಡಿಯೋದಲ್ಲಿ ಕನ್ನಡದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಭಾಗಿಯಾಗಿದ್ದಾರೆ. ಈ ವಿಡಿಯೋಗಳು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಸಾರವಾಗಲಿದೆ. ಕೊರೋನಾ ಕುರಿತು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆಗಳು, ಕೊರೋನಾ ಬಂದರೆ ಏನು ಮಾಡಬೇಕು ಎಂಬಿತ್ಯಾದಿ ಜಾಗೃತಿ ಸಂದೇಶವನ್ನು ಹೇಳಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ