ಹುಟ್ಟುಹಬ್ಬದ ಸಂಭ್ರಮದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಭಾನುವಾರ, 6 ಜೂನ್ 2021 (09:20 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕೊರೋನಾದಿಂದಾಗಿ ಅಭಿಮಾನಿಗಳೊಂದಿಗೆ ರಕ್ಷಿತ್ ಬರ್ತ್ ಡೇ ಇರಲ್ಲ.


ಆದರೆ ಅಭಿಮಾನಿಗಳಿಗೆ ನಿರಾಸೆಯಾಗದಂತೆ ರಕ್ಷಿತ್ ಮತ್ತು ಟೀಂ ಕಡೆಯಿಂದ ಉಡುಗೊರೆಯೊಂದು ಸಿಗಲಿದೆ. ಅವನೇ ಶ್ರೀಮನ್ನಾರಾಯಣ ಸಿನಿಮಾ ಬಳಿಕ ರಕ್ಷಿತ್ ಅಭಿನಯದ ಸಿನಿಮಾ ಯಾವುದೂ ಬಿಡುಗಡೆಯಾಗಿರಲಿಲ್ಲ.

ಇದೀಗ ಚಾರ್ಲಿ 777 ಸಿನಿಮಾ ಚಿತ್ರೀಕರಣ ಮುಗಿಸಿ, ಟೀಸರ್ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾ ತಮಿಳು, ಮಲಯಾಳಂ ಸೇರಿದಂತೆ ಬಹುಭಾಷೆಗಳಲ್ಲಿ ಬಿಡುಗಡೆಯಾಗಲಿದ್ದು, ಇಂದು ರಕ್ಷಿತ್ ಹುಟ್ಟುಹಬ್ಬದ ನಿಮಿತ್ತ ಬೇರೆ ಬೇರೆ ಭಾಷೆಯ ನಟ-ನಟಿಯರು ಟೀಸರ್ ಲಾಂಚ್ ಮಾಡುತ್ತಿದ್ದಾರೆ. ರಕ್ಷಿತ್ ಜೊತೆಗೆ ಈ ಸಿನಿಮಾದಲ್ಲಿ ನಾಯಿಯೂ ಒಂದು ಪ್ರಮುಖ ಪಾತ್ರ ಮಾಡಿದೆ. ಪಕ್ಕಾ ಎಂಟರ್ ಟೈನರ್ ಸಿನಿಮಾ ಇದಾಗಿರಲಿದೆ. ಇದರ ಜೊತೆಗೆ ಸರ್ಪೈಸ್ ಆಗಿ ಸಪ್ತ ಸಾಗರದಾಚೆಯೆಲ್ಲೋ ತಂಡ ಅಧಿಕೃತ ಪೋಸ್ಟರ್ ಒಂದನ್ನೂ ಬಿಡುಗಡೆ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ