KCC Season4: ಕೆಸಿಸಿ ಗೆದ್ದು ಪುನೀತ್ ರಾಜ್ ಕುಮಾರ್ ಗೆ ಪ್ರಶಸ್ತಿ ಅರ್ಪಿಸಿದ ಗಂಗಾ ವಾರಿಯರ್ಸ್
ಮಂಗಳವಾರ, 26 ಡಿಸೆಂಬರ್ 2023 (09:40 IST)
Photo Courtesy: Twitter
ಬೆಂಗಳೂರು: ಕನ್ನಡ ಚಲನಚಿತ್ರ ಕಪ್ ಸೀಸನ್ 4 ರಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನೇತೃತ್ವದ ಗಂಗಾ ವಾರಿಯರ್ಸ್ ತಂಡ ಶಿವರಾಜ್ ಕುಮಾರ್ ನೇತೃತ್ವದ ರಾಷ್ಟ್ರಕೂಟ ಪ್ಯಾಂತರ್ಸ್ ವಿರುದ್ಧ ಗೆದ್ದು ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಇದು ಎರಡನೇ ಬಾರಿಗೆ ಗಣೇಶ್ ನೇತೃತ್ವದ ತಂಡ ಪ್ರಶಸ್ತಿ ಗೆಲ್ಲುತ್ತಿರುವುದು ವಿಶೇಷ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಕೆಸಿಸಿ ಟೂರ್ನಿಯಲ್ಲಿ ಕಿಚ್ಚ ಸುದೀಪ್, ಶಿವರಾಜ್ ಕುಮಾರ್, ಡಾಲಿ ಧನಂಜಯ್, ಗೋಲ್ಡನ್ ಸ್ಟಾರ್ ಗಣೇಶ‍್, ದುನಿಯಾ ವಿಜಯ್ ಸೇರಿದಂತೆ ಅನೇಕ ಸಿನಿ ತಾರೆಯರು ಭಾಗವಹಿಸಿದ್ದರು.
ಜೊತೆಗೆ ಪ್ರತೀ ತಂಡದಲ್ಲೂ ಅಂತಾರಾಷ್ಟ್ರೀಯ ತಂಡದಲ್ಲಿ ಆಡಿದ ಅನುಭವವಿರುವ ಆಟಗಾರರಾದ ಸುರೇಶ್ ರೈನಾ, ಮುರಳಿ ವಿಜಯ್, ಹರ್ಷಲ್ ಗಿಬ್ಸ್, ದಿಲ್ಶನ್, ರಾಬಿನ್ ಉತ್ತಪ್ಪ ಸೇರಿದಂತೆ ಸ್ಟಾರ್ ಗಳೂ ಭಾಗಿಯಾಗಿದ್ದರು.
ಅಂತಿಮ ಪಂದ್ಯ ಗೆದ್ದ ಗಣೇಶ್ ನೇತೃತ್ವದ ತಂಡಕ್ಕೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪ್ರಶಸ್ತಿ ವಿತರಿಸಿದರು. ಬಳಿಕ ಗಂಗಾ ವಾರಿಯರ್ಸ್ ಈ ಪ್ರಶಸ್ತಿಯನ್ನು ನಟ ಪುನೀತ್ ರಾಜ್ ಕುಮಾರ್ ಗೆ ಅರ್ಪಿಸಿ ಗಮನ ಸೆಳೆದರು.