ಪುನೀತ್ ಪರ್ವಕ್ಕಾಗಿ ಬಿಡುಗಡೆಯಾಯಿತು ಹೊಸ ಸಿಡಿಪಿ: ಅಣ್ಣಾವ್ರ ಜೊತೆ ಅಪ್ಪು

ಗುರುವಾರ, 20 ಅಕ್ಟೋಬರ್ 2022 (16:26 IST)
Photo Courtesy: Twitter
ಬೆಂಗಳೂರು: ನಾಳೆ ನಡೆಯಲಿರುವ ಗಂಧದ ಗುಡಿ ಪ್ರಿ ರಿಲೀಸ್ ಈವೆಂಟ್ ಗಾಗಿ ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಕಾಂತಿ ಸ್ಟುಡಿಯೋ ಹೊಸ ಸಿಡಿಪಿಯೊಂದನ್ನು ಬಿಡುಗಡೆ ಮಾಡಿದೆ.

ವರನಟ ಡಾ.ರಾಜ್ ಕುಮಾರ್ ಗಂಧದ ಗುಡಿ ಸಿನಿಮಾದಲ್ಲಿ ಆನೆಯ ದಂತದ ಮೇಲೆ ಕೂರುವ ದೃಶ್ಯವೊಂದು ನಿಮಗೆ ನೆನಪಿರಬಹುದು. ಅದೇ ಫೋಟೋ ಜೊತೆಗೆ ಪುನೀತ್ ಕೂಡಾ ಸೇರಿಕೊಂಡಿದ್ದು ಇಂತಹದ್ದೊಂದು ವಿಶಿಷ್ಟ ಸಿಡಿಪಿಯನ್ನು ಪುನೀತ್ ಪರ್ವ ಕಾರ್ಯಕ್ರಮ ಹಿನ್ನಲೆಯಲ್ಲಿ ಬಿಡುಗಡೆ ಮಾಡಲಾಗಿದೆ.

ಇನ್ನು, ಈ ಫೋಟೋವನ್ನು ದೊಡ್ಮನೆ ಕುಡಿಗಳಾದ ಯುವರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಮುಂತಾದವರು ಹಂಚಿಕೊಂಡಿದ್ದು, ಇದೊಂದು ಅದ್ಭುತ ಕಲ್ಪನೆ ಎಂದು ಕೊಂಡಾಡಿದ್ದಾರೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ