ಪುಪ್ಪ 2 ಕಾಲ್ತುಳಿತ: ಮೃತ ರೇವತಿ ಕುಟುಂಬಕ್ಕೆ 50 ಲಕ್ಷ ಹಸ್ತಾಂತರಿಸಿದ ಸಿನಿಮಾ ನಿರ್ಮಾಪಕ

Sampriya

ಸೋಮವಾರ, 23 ಡಿಸೆಂಬರ್ 2024 (19:52 IST)
Photo Courtesy X
ತೆಲಂಗಾಣ: ಡಿಸೆಂಬರ್ 4 ರಂದು ಹೈದರಾಬಾದ್‌ನಲ್ಲಿ ಪುಪ್ಪ 2 ಮೊದಲ ಪ್ರದರ್ಶನದ ವೇಳೆ ಕಾಲ್ತುಳಿತದಿಂದ ಸಾವನ್ನಪ್ಪಿದ  ರೇವತಿ ಅವರ ಕುಟುಂಬಕ್ಕೆ ಸಿನಿಮಾ ನಿರ್ಮಾಪಕರು 50ಲಕ್ಷ ನೀಡಿದ್ದಾರೆ.

ನಿರ್ಮಾಣ ಸಂಸ್ಥೆಯಾದ ಮೈತ್ರಿ ಮೂವಿ ಮೇಕರ್ಸ್ ಅವರು ರೇವತಿ ಕುಟುಂಬಕ್ಕೆ 50ಲಕ್ಷ ಧನ ಸಹಾಯ ಮಾಡಿದ್ದಾರೆ. ಡಿಸೆಂಬರ್ 4ರಂದು ಸಂಭವಿಸಿದ ದುರಂತದಲ್ಲಿ ರೇವತಿ ಅವರು ಸಾವನ್ನಪ್ಪಿದ್ದು, ಅವರ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಪ್ರಸ್ತುತ ನಗರದ ಖಾಸಗಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

ಸಂಧ್ಯಾ ಥಿಯೇಟರ್ ಕಾಲ್ತುಳಿತ ಘಟನೆಯಲ್ಲಿ ಸಂತ್ರಸ್ತರ ಕುಟುಂಬಕ್ಕೆ ನಿರ್ಮಾಪಕ ನವೀನ್ ಯೆರ್ನೇನಿ 50 ಲಕ್ಷ ರೂಪಾಯಿ ಚೆಕ್ ಅನ್ನು ಹಸ್ತಾಂತರಿಸಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀ ತೇಜ್ ಅವರನ್ನು ಸಚಿವ ಕೋಮಟಿ ರೆಡ್ಡಿ ಅವರೊಂದಿಗೆ ನವೀನ್ ಯೆರ್ನೇನಿ ಭೇಟಿ ಮಾಡಿ, ಮೃತಳ ಪತಿ ರೇವತಿ ಭಾಸ್ಕರ್ ಅವರಿಗೆ ಚೆಕ್ ನೀಡಿದರು.

ತೇಜ್ ಅವರ ಕುಟುಂಬವನ್ನು ಬೆಂಬಲಿಸಲು ಅಲ್ಲು ಅರ್ಜುನ್ 25 ಲಕ್ಷ ರೂಪಾಯಿಗಳ ಆರ್ಥಿಕ ಸಹಾಯವನ್ನು ವಾಗ್ದಾನ ಮಾಡಿದ್ದಾರೆ. ನಿರ್ದೇಶಕ ಸುಕುಮಾರ್ ಮತ್ತು ಅವರ ಪತ್ನಿ ತಬಿತಾ ಕೂಡ 5 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ, ನಿರ್ಮಾಪಕರಾದ ಅಲ್ಲು ಅರವಿಂದ್ ಮತ್ತು ಬನ್ನಿ ವಾಸುಲು ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ತಮ್ಮ ಅಚಲ ಬೆಂಬಲವನ್ನು ಭರವಸೆ ನೀಡಿದ್ದಾರೆ.

ಕಾಲ್ತುಳಿತದ ನಂತರ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಯಿತು, ಆದರೆ ಅದೇ ದಿನ ತೆಲಂಗಾಣ ಹೈಕೋರ್ಟ್ ಅವರಿಗೆ ನಾಲ್ಕು ವಾರಗಳ ಮಧ್ಯಂತರ ಜಾಮೀನು ನೀಡಿತು. ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ವಿಭಾಗಗಳ ಅಡಿಯಲ್ಲಿ ನಟ, ಅವರ ಭದ್ರತಾ ತಂಡ ಮತ್ತು ಥಿಯೇಟರ್ ಆಡಳಿತದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ