ಪುಷ್ಪ 2 ಕಾಲ್ತುಳಿತ: ಗಾಯಗೊಂಡ ಬಾಲಕನ ಆರೋಗ್ಯ ವಿಚಾರಿಸಿದ ನಿರ್ದೇಶಕ ಸುಕುಮಾರ್
ಬಾಲಕನ ಕುಟುಂಬಕ್ಕೆ ಸುಕುಮಾರ್ ಅವರು ₹5 ಲಕ್ಷ ಹಣ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಡಿಸೆಂಬರ್ 10 ರಂದು ಹೈದರಾಬಾದ್‌ನ ಸಂದ್ಯಾ ಚಿತ್ರಮಂದಿರದಲ್ಲಿ ಪುಷ್ಪ 2 ವೀಕ್ಷಣೆಗೆ ಬಂದಿದ್ದ ಕುಟುಂಬವೊಂದರ ತಾಯಿ-ಮಗು ನೂಕಲಾಟ ಮತ್ತು ಕಾಲ್ತುಳಿತದಿಂದ ಗಂಭೀರವಾಗಿ ಗಾಯಗೊಂಡಿದ್ದರು. ತಾಯಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು.
ಈ ಸಂಬಂಧ ನಟ ಅಲ್ಲು ಅರ್ಜುನ್ ವಿರುದ್ಧ ಪ್ರಕರಣ ದಾಖಲಾಗಿದೆ. ಅದಲ್ಲದೆ ಅಲ್ಲು ಅರ್ಜುನ್‌ರನ್ನು ವಶಕ್ಕೆ ಪಡೆಯಲಾಗುತ್ತು. ಒಂದು ದಿನ ಜೈಲಿನಲ್ಲಿ ಕಳೆದು ಬಿಡುಗಡೆಗೊಂಡಿದ್ದರು. ಸಂದ್ಯಾ ಚಿತ್ರಮಂದಿರದ ವಿರುದ್ಧವೂ ಪ್ರಕರಣ ದಾಖಲಾಗಿದೆ.