ಪುಷ್ಪ 2 ಕ್ಲೈಮ್ಯಾಕ್ಸ್ ಶೂಟಿಂಗ್ ಗೆ ರೆಡಿಯಾಯ್ತು ಪ್ಲ್ಯಾನ್

ಶುಕ್ರವಾರ, 23 ಜೂನ್ 2023 (08:40 IST)
ಹೈದರಾಬಾದ್: ಅಲ್ಲು ಅರ್ಜುನ್ ನಾಯಕರಾಗಿರುವ ಬಹುನಿರೀಕ್ಷಿತ ಪುಷ್ಪ 2 ಸಿನಿಮಾದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಪ್ಲ್ಯಾನ್ ರೆಡಿಯಾಗಿದೆ.

ಪುಷ್ಪ 1 ಭಾರೀ ಹಿಟ್ ಆಗಿತ್ತು. ಅಲ್ಲು ಅರ್ಜುನ್ ಪುಷ್ಪ ಆಗಿ ರಗಡ್ ಲುಕ್ ನಲ್ಲಿ ಮಿಂಚಿದ್ದರೆ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಕಾಣಿಸಿಕೊಂಡಿದ್ದರು. ಅಲ್ಲು ಅರ್ಜುನ್ ಹುಟ್ಟುಹಬ್ಬಕ್ಕೆ ಪುಷ್ಪ 2 ಸಿನಿಮಾದ ಟೀಸರ್ ಒಂದನ್ನು ಹೊರಬಿಡಲಾಗಿತ್ತು.

ಇದೀಗ ಶೂಟಿಂಗ್ ಕೊನೆಯ ಹಂತ ತಲುಪಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ಗೆ ಸಿದ್ಧತೆ ನಡೆಸಲಾಗಿದೆ. ತಿರುಪತಿ ಜಿಲ್ಲೆಯ ಸ್ವರ್ಣಮುಖಿ ನದಿಯ ತೀರದಲ್ಲಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಫಹಾದ್ ಫಾಸಿಲ್ ಮತ್ತು ಅಲ್ಲು ಅರ್ಜುನ್ ನಡುವಿನ ಫೈಟಿಂಗ್ ದೃಶ‍್ಯವನ್ನು ಇಲ್ಲಿ ಚಿತ್ರೀಕರಣ ನಡೆಸುವ ಸಾಧ‍್ಯತೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ