49 ನೇ ವರ್ಷಕ್ಕೆ ಕಾಲಿಟ್ಟ ದಳಪತಿ ವಿಜಯ್

ಗುರುವಾರ, 22 ಜೂನ್ 2023 (08:10 IST)
ಚೆನ್ನೈ: ಕಾಲಿವುಡ್ ಹ್ಯಾಂಡ್ಸಮ್ ಹೀರೋ ದಳಪತಿ ವಿಜಯ್ ಗೆ ಇಂದು 49 ನೇ ಜನ್ಮದಿನದ ಸಂಭ್ರಮ. ಅವರ ಜನ್ಮದಿನಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.

ಬಾಲ್ಯ ನಟನಾಗಿ ಮೊದಲ ಬಾರಿಗೆ ಬಣ್ಣ ಹಚ್ಚಿದ್ದ ವಿಜಯ್ ಬಳಿಕ 1992 ರಲ್ಲಿ ಮೊದಲ ಬಾರಿಗೆ ನಾಯಕನಾಗಿ ಚಿತ್ರರಂಗಕ್ಕೆ ಕಾಲಿಟ್ಟರು. ಇದುವರೆಗೆ 67 ಸಿನಿಮಾಗಳಲ್ಲಿ ನಟಿಸಿದ್ದಾರೆ. ಲಿಯೋ ಅವರ ಮುಂದಿನ ಚಿತ್ರ. ಇದು ಅಕ್ಟೋಬರ್ 19 ರಂದು ಬಿಡಗುಡೆಯಾಗಲಿದೆ.

ಇಂದು ಅವರ ಜನ್ಮದಿನದ ನಿಮಿತ್ತ ಲಿಯೋ ಸಿನಿಮಾದ ನಾ ರೆಡಿ ಎನ್ನುವ ಹಾಡು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಸಿನಿಮಾವನ್ನು ಲೋಕೇಶ್ ಕನಗರಾಜು ನಿರ್ದೇಶಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ