ಥಿಯೇಟರ್ ಖಾಲಿ ಹೊಡೆಯುತ್ತಿರುವ ಬೆನ್ನಲ್ಲೇ ಟಿಕೆಟ್ ದರ ಇಳಿಸಿದ ಆದಿಪುರುಷ್ ತಂಡ

ಗುರುವಾರ, 22 ಜೂನ್ 2023 (16:11 IST)
ಹೈದರಾಬಾದ್: ಪ್ರಭಾಸ್ ನಾಯಕರಾಗಿರುವ ಆದಿಪುರುಷ್ ಸಿನಿಮಾ ಮೊದಲೆರಡು ದಿನ ಮಾಡಿದಷ್ಟು ಅಬ್ಬರ ಈಗಿಲ್ಲ. ನೆಗೆಟಿವ್ ರಿವ್ಯೂ ಬಂದ ಬೆನ್ನಲ್ಲೇ ಚಿತ್ರ ನೋಡುವವರ ಸಂಖ್ಯೆಯೂ ಕಡಿಮೆಯಾಗಿದೆ.

ಥಿಯೇಟರ್ ಗಳು ಮೊದಲಿನಂತೆ ಭರ್ತಿಯಾಗುತ್ತಿಲ್ಲ. ಹಲವು ವಿವಾದಗಳ ಹಿನ್ನಲೆಯಲ್ಲಿ ಸಿನಿಮಾ ನೋಡಲು ಬರುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ ಚಿತ್ರತಂಡ ಹೊಸ ಪ್ಲ್ಯಾನ್ ಮಾಡಿದೆ.

ತ್ರಿಡಿಯಲ್ಲಿ ಟಿಕೆಟ್ ದರ ಈಗ 150 ರೂ.ಗೆ ಇಳಿದಿದೆ. ಆದರೆ ಎರಡೇ ದಿನ ಈ ಆಫರ್ ಸಿಗಲಿದೆ. ಇನ್ನು, ವಿವಾದಕ್ಕೀಡಾಗಿದ್ದ ಕೆಲವು ಸಂಭಾಷಣೆಗಳಿಗೂ ಕತ್ತರಿ ಹಾಕಲಾಗಿದೆಯಂತೆ. ಈ ಮೊದಲು ಆದಿಪುರುಷ್ ಸಿನಿಮಾ ಟಿಕೆಟ್ ಮಲ್ಟಿಪ್ಲೆಕ್ಸ್ ನಲ್ಲಿ 400 ರೂ.ವರೆಗೂ ಇತ್ತು. ಆದರೆ ಇದೀಗ ಪ್ರೇಕ್ಷಕರನ್ನು ಸೆಳೆಯಲು ಎರಡು ದಿನಕ್ಕೆ ಟಿಕೆಟ್ ದರ ಕಡಿತ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ