ಅಲ್ಲು ಅರ್ಜುನ್ ಬರ್ತ್ ಡೇಗೆ ಇಂದು ಪುಷ್ಪ 2 ಟೀಸರ್ ಬಿಡುಗಡೆ

Krishnaveni K

ಸೋಮವಾರ, 8 ಏಪ್ರಿಲ್ 2024 (08:00 IST)
ಹೈದರಾಬಾದ್: ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಬರ್ತ್ ಡೇ ನಿಮಿತ್ತ ಇಂದು ಬಹುನಿರೀಕ್ಷಿತ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪ 2 ಟೀಸರ್ ಬಿಡುಗಡೆಯಾಗುತ್ತಿದೆ.

ಪುಷ್ಪ ಭಾಗ 1 ಭಾರೀ ಹಿಟ್ ಆಗಿತ್ತು. ಈ ಸಿನಿಮಾದ ಹಾಡುಗಳಿಂದ ಹಿಡಿದು, ಆ‍ಕ್ಷನ್, ಕಲಾವಿದರು ಪ್ರತಿಯೊಂದು ವಿಭಾಗವೂ ಎಲ್ಲರ ಗಮನ ಸೆಳೆದಿತ್ತು. ಹೀಗಾಗಿ ಚಿತ್ರತಂಡ ಎರಡನೇ ಭಾಗ ನಿರ್ಮಾಣ ಮಾಡಿದೆ. ಸಿನಿಮಾ ಇದೇ ವರ್ಷ ಆಗಸ್ಟ್ 15 ರಂದು ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಸುಕುಮಾರ್ ನಿರ್ದೇಶನದ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ, ಪ್ರಮುಖ ಪಾತ್ರದಲ್ಲಿ ಫಹಾದ್ ಫಾಸಿಲ್ ಅಭಿನಯಿಸುತ್ತಿದ್ದಾರೆ. ಈ ಸಿನಿಮಾದ ಬಹುನಿರೀಕ್ಷಿತ ಟೀಸರ್ ಇಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರತಂಡ ತ್ರಿಶೂಲ ಮತ್ತು ಕೆಂಪು ಬಣ್ಣದ ಹಿನ್ನಲೆಯಲ್ಲಿ ಗೆಜ್ಜೆ ಕಟ್ಟಿದ ಕಾಲೊಂದರ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿ ಎಲ್ಲರ ಗಮನ ಸೆಳೆದಿತ್ತು.

ಇದೀಗ ಟೀಸರ್ ಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.  ಮೊನ್ನೆಯಷ್ಟೇ ರಶ್ಮಿಕಾ ಮಂದಣ್ಣ ಬರ್ತ್ ಡೇ ಪ್ರಯುಕ್ತ ಶ್ರೀವಲ್ಲಿ ಲುಕ್ ನ ಪೋಸ್ಟರ್ ಬಿಡುಗಡೆಯಾಗಿತ್ತು. ಪುಷ್ಪ 1 ರಿಗಿಂತಲೂ ಮೈನವಿರೇಳಿಸುವ ಸಾಹಸ ದೃಶ್ಯಗಳು ಪುಷ್ಪ 2 ರಲ್ಲಿ ಇರಲಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ