ಪುಷ್ಪ ಸಿನಿಮಾ ತಂಡವನ್ನು ಟ್ರೋಲ್ ಮಾಡ್ತಿರುವ ಕೆಜಿಎಫ್ ಅಭಿಮಾನಿಗಳು

ಶನಿವಾರ, 23 ಜುಲೈ 2022 (09:10 IST)
ಹೈದರಾಬಾದ್: ಇತ್ತೀಚೆಗೆ ನಟ ಫಹಾದ್ ಫಾಸಿಲ್ ಪುಷ್ಪ 3 ಗೂ ಸಾಕಷ್ಟು ಕತೆ ರೆಡಿಯಿದೆ ಎಂದಿದ್ದರು. ಇದರ ಬೆನ್ನಲ್ಲೇ ಈಗ ಪುಷ್ಪ ಸಿನಿಮಾ ತಂಡವನ್ನು ಕೆಜಿಎಫ್ ಸಿನಿಮಾ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದಾರೆ.

ಪುಷ್ಪ ಸಿನಿಮಾದ ಕತೆ ಹೆಚ್ಚು ಕಡಿಮೆ ಕೆಜಿಎಫ್ ಕತೆಯನ್ನೇ ಹೋಲುತ್ತದೆ. ಕೆಜಿಎಫ್ ನಲ್ಲಿ ಚಿನ್ನದ ಗಣಿಯ ಕತೆಯಾದರೆ ಇಲ್ಲಿ ರಕ್ತಚಂದನ ಕಳ್ಳಸಾಗಣಿಕೆ ಕುರಿತಾದ ಕತೆಯಿದೆ. ಕೆಜಿಎಫ್ 2 ಯಶಸ್ಸು ಕಂಡ ಬೆನ್ನಲ್ಲೇ ಪುಷ್ಪ 2 ಸಿನಿಮಾ ತಂಡವೂ ಕತೆಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿತು.

ಇದೀಗ ಕೆಜಿಎಫ್ 3 ಮಾಡುವ ಯೋಜನೆ ಬಗ್ಗೆ ಚಿತ್ರತಂಡ ಸುಳಿವು ಕೊಟ್ಟ ಮೇಲೆ ಪುಷ್ಪ ತಂಡವೂ ಮೂರನೇ ಭಾಗ ನಡೆಸಲು ಉತ್ಸುಕವಾಗಿದೆ. ಹೀಗಾಗಿ ಕೆಜಿಎಫ್ ಅಭಿಮಾನಿಗಳು, ಪುಷ್ಪ ತಂಡ ನಮ್ಮನ್ನೇ ಕಾಪಿ ಮಾಡುತ್ತಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ