ರಮೇಶ್ ಅಭಿನಯದ ಪುಷ್ಪಕ ವಿಮಾನ ಚಿತ್ರ ಪ್ರದರ್ಶನಕ್ಕೆ ತಡೆ

ಶುಕ್ರವಾರ, 31 ಮಾರ್ಚ್ 2017 (17:04 IST)
ರಮೇಶ್ ಅರವಿಂದ್ ಅಭಿನಯದ ಪುಷ್ಪಕ ವಿಮಾನ ಚಿತ್ರ ಪ್ರದರ್ಶನಕ್ಕೆ ಬಾಂಬೆ ಹೈಕೋರ್ಟ್ ತಡೆ ನೀಡಿದೆ. ದಕ್ಷಿಣ ಕೊರಿಯಾದ `ಮಿರಾಕಲ್ ಇನ್ ಸೆಲ್ ನಂ7’ ಚಿತ್ರದ ಕಾಪಿರೈಟ್ ಉಲ್ಲಂಘಿಸಿ ನಕಲು ಮಾಡಿದ ಆರೋಪದಡಿ ಚಿತ್ರಕ್ಕೆ ತಡೆ ನೀಡಲಾಗಿದೆ.

ಚಿತ್ರವನ್ನ ಕಿರುತೆರೆಯಲ್ಲೂ ಪ್ರಸಾರ ಮಾಡುವಂತಿಲ್ಲ. ಸಿಡಿ ಮತ್ತು ಡಿವಿಡಿಗಳನ್ನ ಮಾರಾಟ ಮಾಡುವಂತಿಲ್ಲ. ಪ್ರಶಸ್ತಿಗಳಿಗೂ ಪರಿಗಣಿಸದಂತೆ ಬಾಂಬೆ ಹೈಕೋರ್ಟ್ ಆದೇಶಿಸಿದೆ.

ರಮೇಶ್ ಅರವಿಂದ್ ಅವರ 100ನೇ ಚಿತ್ರ ಇದಾಗಿದ್ದು, ದಕ್ಷಿಣ ಕೊರಿಯಾದ ಚಿತ್ರ ನಿರ್ಮಾಣ ಸಂಸ್ಥೆ ಕಾಪಿರೈಟ್ ಕಾಯ್ದೆಯಡಿ ಮೊಕದ್ದಮೆ ದಾಖಲಿಸಿತ್ತು.

ವೆಬ್ದುನಿಯಾವನ್ನು ಓದಿ