ಅಪ್ಪನ ನೆರಳಲ್ಲಿ ಬದುಕುವುದು ಇಷ್ಟವಿರಲಿಲ್ಲ: ಆರ್. ಮಾಧವನ್ ಪುತ್ರ ವೇದಾಂತ್
ಇದೀಗ ತಮ್ಮ ಸಾಧನೆಯ ಬಗ್ಗೆ ಮಾತನಾಡಿರುವ ವೇದಾಂತ್ ಅಪ್ಪ ಹೆಸರಾಂತ ನಟರಾದರೂ ಅವರ ನೆರಳಲ್ಲಿ ಬದುಕುವುದು ಇಷ್ಟವಿರಲಿಲ್ಲ. ನಾನು ಮಾಧವನ್ ಪತ್ರ ಎಂದು ಅವರ ಹೆಸರು ಹೇಳಿಕೊಂಡು ಜೀವನ ಮಾಡುವ ಬದಲು ತನ್ನದೇ ಹೆಸರು ಮಾಡಬೇಕು ಎಂಬುದು ಕನಸಾಗಿತ್ತು ಎಂದು ವೇದಾಂತ್ ಹೇಳಿದ್ದಾರೆ. ತನಗೆ ಬೆಂಬಲವಾಗಿರುವ ತಂದೆ ಮತ್ತು ತಾಯಿ ಬಗ್ಗೆ ನೆನೆದಿರುವ ವೇದಾಂತ್, ನನ್ನ ವೃತ್ತಿಜೀವನಕ್ಕಾಗಿ ಇಬ್ಬರೂ ತ್ಯಾಗ ಮಾಡಿದ್ದು, ದುಬೈಗೆ ಬಂದು ನೆಲೆಸುವ ದೊಡ್ಡ ನಿರ್ಧಾರ ಕೈಗೊಂಡರು ಎಂದಿದ್ದಾರೆ.