ಶ್ರೀಲಂಕಾಗೆ ಭಾರತದಿಂದ ನೆರವು

ಸೋಮವಾರ, 25 ಏಪ್ರಿಲ್ 2022 (12:22 IST)
ತೀವ್ರ ಆರ್ಥಿಕ ಬಿಕ್ಕಟ್ಟಿಗೆ ತುತ್ತಾಗಿರುವ ಶ್ರೀಲಂಕಾಗೆ ಇಂಧನ ಖರೀದಿಸಲು ನೆರವಾಗುವಂತೆ ಹೆಚ್ಚುವರಿ 3800 ಕೋಟಿ (500 ಮಿಲಿಯನ್ ಡಾಲರ್)ರು.
 
ಹಣವನ್ನು ನೀಡಲು ಭಾರತ ಒಪ್ಪಿಗೆ ಸೂಚಿಸಿದೆ ಎಂದು ಶುಕ್ರವಾರ ಶ್ರೀಲಂಕಾದ ಹಣಕಾಸು ಸಚಿವ ಆಲಿ ಸಬ್ರಿ ತಿಳಿಸಿದ್ದಾರೆ. ಈಗಾಗಲೇ ಭಾರತ, ಶ್ರೀಲಂಕಾ ಏಷ್ಯನ್ ಕ್ಲಿಯರಿಂಗ್ ಯೂನಿಯನ್ಗೆ ಪಾವತಿಸಬೇಕಿದ್ದ 1.5 ಬಿಲಿಯನ್ ಹಣವನ್ನು ನೀಡಲು ಮುಂದಾಗಿದೆ.

ಇತ್ತೀಚೆಗೆ ಆರ್ಥಿಕ ದಿವಾಳಿತನ ಮತ್ತು ರಾಜಕೀಯ ಪ್ರಕ್ಷುಬ್ಧತೆ ಯಿಂದಾಗಿ ಶ್ರೀಲಂಕಾದ ವಿದೇಶಿ ವಿನಿಮಯಗಳು ಕುಸಿತ ಕಂಡ ಬಳಿಕ, ಆಮದುಗಳಿಗೆ ಹಣ ಪಾವತಿಸಲು ಲಂಕಾ ಹೆಣಗಾಡುತ್ತಿದೆ.

ಇದು ದೇಶದಲ್ಲಿ ಹಣದುಬ್ಬರ ಹೆಚ್ಚಾಗುವಂತೆ ಮಾಡಿದೆ . ಶ್ರೀಲಂಕಾದ ಆರ್ಥಿಕತೆ ಸ್ಥಿರತೆ ಕಾಯ್ದುಕೊಳ್ಳಲು ಕನಿಷ್ಠ 30 ಸಾವಿರ ಕೋಟಿ ರು. ಬೇಕಿದೆ. ಇದಕ್ಕಾಗಿ ಸಬ್ರಿ ವಿಶ್ವಬ್ಯಾಂಕ್ ಹಾಗೂ ಚೀನಾ ಮತ್ತು ಜಪಾನ್ ನಂತ ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಜೊತೆ ಆರ್ಥಿಕ ನೆರವಿಗಾಗಿ ಮಾತುಕತೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ