ಡಿನ್ನರ್ ಡೇಟ್ ಬಳಿಕ ಮುಖ ಮುಚ್ಚಿಕೊಂಡು ಹೊರಬಂದ ರಶ್ಮಿಕಾ-ವಿಜಯ್ ದೇವರಕೊಂಡ

ಸೋಮವಾರ, 19 ಏಪ್ರಿಲ್ 2021 (11:39 IST)
ಮುಂಬೈ: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ-ವಿಜಯ್ ದೇವರಕೊಂಡ ಮತ್ತೆ ಸುದ್ದಿಯಲ್ಲಿದ್ದಾರೆ. ಇತ್ತೀಚೆಗೆ ಇಬ್ಬರೂ ಜೊತೆ ಜೊತೆಯಾಗಿ ಓಡಾಡುತ್ತಿದ್ದು, ಗಾಸಿಪ್ ಕಾಲಂಗಳಿಗೆ ಆಹಾರವಾಗಿದ್ದಾರೆ.


ಮೊನ್ನೆಯಷ್ಟೇ ವಿಜಯ್-ರಶ್ಮಿಕಾ ಮುಂಬೈನಲ್ಲಿ ಜೊತೆಯಾಗಿ ಡಿನ್ನರ್ ಗೆ ತೆರಳಿ ಸುದ್ದಿಯಾಗಿದ್ದರು. ಇದೀಗ ಮತ್ತೆ ಈ ಜೋಡಿ ಡಿನ್ನರ್ ಡೇಟ್ ಗೆ ತೆರಳಿರುವುದು ಸುದ್ದಿಯಾಗಿದೆ. ವಿಶೇಷವೆಂದರೆ ಡೇಟ್ ಮುಗಿಸಿ ರೆಸ್ಟೋರೆಂಟ್ ನಿಂದ ಹೊರಬರುವಾಗ ವಿಜಯ್ ಫೋಟೋಗ್ರಾಫರ್ ಗಳಿಂದ ತಪ್ಪಿಸಿಕೊಳ್ಳಲು ಮುಖ ಮುಚ್ಚಿಕೊಂಡು ಹೊರಬಂದಿದ್ದಾರೆ.

ಇದಲ್ಲದೆ, ರಶ್ಮಿಕಾ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ನಿನ್ನೆ ವಿಜಯ್ ದೇವರಕೊಂಡ ಗಿಫ್ಟ್ ಬಾಕ್ಸ್ ಹಿಡಿದು ನಿಂತಿರುವ ಫೋಟೋವೊಂದನ್ನು ಪ್ರಕಟಿಸಿ ಇದು ಯಾರು ಎಂದು ಊಹಿಸಿ ನೋಡೋಣ ಎಂದು ಬರೆದಿದ್ದರು. ಹೀಗಾಗಿ ಇಬ್ಬರ ನಡುವೆ ಮತ್ತೆ ಏನೋ ಇದೆ ಎಂಬ ಸುದ್ದಿಗೆ ಚಾಲೂ ಸಿಕ್ಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ