ರಜನಿಕಾಂತ್ ಎದುರು ರಚಿತಾ ರಾಮ್‌ ಖಡಕ್ ರೋಲ್‌ ಕೊಟ್ಟ ಕೂಲಿ ತಂಡ

Sampriya

ಸೋಮವಾರ, 16 ಸೆಪ್ಟಂಬರ್ 2024 (17:18 IST)
Photo Courtesy X
ನಟ ರಜನಿಕಾಂತ್ ಅವರ ಮುಂದಿನ ಸಿನಿಮಾ ಕೂಲಿಯಲ್ಲಿ ಬುಲ್ ಬುಲ್, ಡಿಂಪಲ್ ಕ್ವೀನ್ ರಚಿತಾ ರಾಮ್ ಅವರು ವಿಶೇಷ ಪಾತ್ರದಲ್ಲಿ ಮಿಂಚಲಿದ್ದಾರೆಂಬ ಸುದ್ದಿ ಕಳೆದ ಕೆಲ ದಿನಗಳಿಂದ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಕನ್ನಡ ಸಿನಿಮಾದಲ್ಲಿ ನಾಯಕಿಯಾಗಿ ಮಿಂಚುತ್ತಿರುವ ರಚಿತಾ ರಾಮ್ ಅವರು ರಜನಿಕಾಂತ್ ವಿರುದ್ಧ ನೆಗೆಟಿವ್ ಶೇಡ್‌ನಲ್ಲಿ ಮಿಂಚಲಿದ್ದಾರೆಂಬ ಸುದ್ದಿಯಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನೂ ಲಭಿಸಿಲ್ಲ. ಖಳನಾಯಕಿಯಾಗಿ ಬಣ್ಣ ಹಚ್ಚುವ ಮೂಲಕ ರಚಿತಾ  ಅವರು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಸದ್ಯ ಈ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ವೈರಲ್ ಆಗಿದ್ದು, ಇದನ್ನು ನೋಡಿದ ಅವರ ಅಭಿಮಾನಿಗಳು ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಶೂಟಿಂಗ್ ಹಿನ್ನೆಲೆ ರಚಿತಾ ರಾಮ್ ಅವರು ಚೆನ್ನೈಗೆ ಪ್ರಯಾಣ ಬೆಳೆಸಿದ್ದಾರೆ. ಇದೂ ರಚಿತಾ ರಾಮ್ ಅವರ ಮೊದಲ ತಮಿಳು ಸಿನಿಮಾವಾಗಿದೆ. ಈ ಚಿತ್ರದ ಮೂಲಕ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ.

ಕೂಲಿ ಮುಂಬರುವ ಭಾರತೀಯ ತಮಿಳು ಭಾಷೆಯ ಆಕ್ಷನ್ ಥ್ರಿಲ್ಲರ್ ಚಲನಚಿತ್ರವಾಗಿದ್ದು, ಇದನ್ನು ಲೋಕೇಶ್ ಕನಕರಾಜ್ ನಿರ್ದೇಶಿಸಿದ್ದಾರೆ ಮತ್ತು ಸನ್ ಪಿಕ್ಚರ್ಸ್ ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಸೌಬಿನ್ ಶಾಹಿರ್, ನಾಗಾರ್ಜುನ, ಶ್ರುತಿ ಹಾಸನ್, ಸತ್ಯರಾಜ್ ಮತ್ತು ಉಪೇಂದ್ರ ಸೇರಿದಂತೆ ದೊಡ್ಡ ತಾರಾ ಬಳಗವನ್ನು ಹೊಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ