ಗರಡಿ ಸಿನಿಮಾ ನಾಯಕಿ ಚೇಂಜ್: ರಚಿತಾ ಜಾಗಕ್ಕೆ ಬಂದ್ರು ಸೋನಲ್
ಯಶಸ್ ಸೂರ್ಯ ನಾಯಕರಾಗಿರುವ ಗರಡಿ ಸಿನಿಮಾಗೆ ರಚಿತಾ ರಾಂ ನಾಯಕಿ ಎಂದು ಘೋಷಿಸಲಾಗಿತ್ತು. ಆದರೆ ಈಗ ಶೂಟಿಂಗ್ ಗೆ ರೆಡಿಯಾಗಬೇಕು ಎನ್ನುವಷ್ಟರಲ್ಲಿ ರಚಿತಾ ಜಾಗಕ್ಕೆ ಸೋನಲ್ ಬಂದಿದ್ದಾರೆ.
ರಚಿತಾ ಈಗಾಗಲೇ ಹಲವು ಸಿನಿಮಾಗಳನ್ನು ಒಪ್ಪಿಕೊಂಡಿದ್ದು, ಬ್ಯುಸಿಯಾಗಿದ್ದಾರೆ. ಡೇಟ್ಸ್ ಸಮಸ್ಯೆಯಿಂದಾಗಿ ರಚಿತಾಗೆ ಗರಡಿ ಸಿನಿಮಾ ಮಾಡಲಾಗುತ್ತಿಲ್ವಂತೆ. ಹೀಗಾಗಿ ಚಿತ್ರತಂಡ ನಾಯಕಿಯನ್ನು ಬದಲಾಯಿಸಿದೆ. ಆದರೆ ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಕಾರಣ ಕೊಟ್ಟಿಲ್ಲ.