ಮುಖ ಮುಚ್ಚಿಕೊಂಡು ಮೆಟ್ರೋನಲ್ಲಿ ಓಡಾಡಿದ ರಚಿತಾ ರಾಮ್

ಮಂಗಳವಾರ, 8 ಅಕ್ಟೋಬರ್ 2019 (08:42 IST)
ಬೆಂಗಳೂರು: ಸೆಲೆಬ್ರಿಟಿಗಳೆಂದರೆ ಹಾಗೆ. ಸಾಮಾನ್ಯರಂತೆ ಎಲ್ಲಿ ಬೇಕೆಂದರಲ್ಲಿ ಓಡಾಡುವಂತಿಲ್ಲ. ಹಾಗಂತ ಸಾಮಾನ್ಯ ಜೀವನದ ಖುಷಿಯನ್ನು ಕಳೆದುಕೊಳ್ಳಲು ಕೆಲವು ಸೆಲೆಬ್ರಿಟಿಗಳು ಇಷ್ಟಪಡವುದಿಲ್ಲ.


ಇದೀಗ ನಟಿ ರಚಿತಾ ರಾಮ್ ದಸರಾ ಹಬ್ಬದ ಬಿಡುವಿನ ವೇಳೆಯಲ್ಲಿ ಸ್ನೇಹಿತೆ ಜತೆಗೆ ಮುಖದ ತುಂಬಾ ಶಾಲು ಸುತ್ತಿಕೊಂಡು ಯಾರಿಗೂ ಗುರುತು ಸಿಗದ ಹಾಗೆ ಮೆಟ್ರೋ ರೈಲಿನಲ್ಲಿ ಓಡಾಡಿ ತಮ್ಮ ಬಹುದಿನಗಳ ಕನಸು ನನಸು ಮಾಡಿಕೊಂಡಿದ್ದಾರೆ. ಈ ಖುಷಿಯ ಕ್ಷಣಗಳನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ರಚಿತಾ ಹಂಚಿಕೊಂಡಿದ್ದಾರೆ.

ಕೆಲವು ದಿನಗಳ ಹಿಂದೆ ನವರಸನಾಯಕ ಜಗ್ಗೇಶ್ ಕೂಡಾ ಇದೇ ರೀತಿ ಮಾಸ್ಕ್ ಹಾಕಿಕೊಂಡು ಮೈಸೂರಿನ ಬೀದಿಯಲ್ಲಿ ಸುತ್ತಾಡಿದ್ದನ್ನು ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದರು. ಇದೀಗ ರಚಿತಾ ಸರದಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ