ಅನಾರೋಗ್ಯದ ಕಾರಣ ಪ್ರೆಸ್ ಮೀಟ್ ರದ್ದುಗೊಳಿಸಿದ ಕಿಚ್ಚ ಸುದೀಪ್
ಕೆಲವು ದಿನಗಳಿಂದ ನಿರಂತರವಾಗಿ ವಿಕ್ರಾಂತ್ ರೋಣ ಪ್ರಚಾರಕ್ಕಾಗಿ ಓಡಾಟ ನಡೆಸಿದ್ದ ಸುದೀಪ್ ಈಗ ಜ್ವರದಿಂದ ಬಳಲುತ್ತಿದ್ದಾರೆ. ಸದ್ಯಕ್ಕೆ ಅವರು ಚೇತರಿಕೆಯ ಹಾದಿಯಲ್ಲಿದ್ದಾರೆ. ಕೊಚ್ಚಿ, ಹೈದರಾಬಾದ್, ದೆಹಲಿ, ಚೆನ್ನೈ ಮಾಧ್ಯಮಗಳಿಗಾಗಿ ಸುದೀಪ್ ಪತ್ರಿಕಾಗೋಷ್ಠಿಯಲ್ಲಿ ಭಾಗಿಯಾಗಬೇಕಿತ್ತು. ಅಲ್ಲದೆ ವಿಜಯ ಟಿವಿಯ ಶೋ ಒಂದರಲ್ಲಿ ಪಾಲ್ಗೊಳ್ಳಬೇಕಾಗಿತ್ತು.
ಆದರೆ ಅನಾರೋಗ್ಯದ ನಿಮಿತ್ತ ಈ ಎಲ್ಲಾ ಕಾರ್ಯಕ್ರಮಗಳಿಂದ ದೂರವುಳಿಯಲು ಸುದೀಪ್ ತೀರ್ಮಾನಿಸಿದ್ದಾರೆ. ಇದಕ್ಕಾಗಿ ಮಾಧ‍್ಯಮ ಮಿತ್ರರಲ್ಲಿ ಕ್ಷಮೆ ಕೋರಿದ್ದಾರೆ.