ಗುಮ್ಮ ಬಂದ ಗುಮ್ಮ..! ವಿಕ್ರಾಂತ್ ರೋಣ ಪವರ್ ಫುಲ್ ಸಾಂಗ್ ರಿಲೀಸ್

ಗುರುವಾರ, 21 ಜುಲೈ 2022 (16:06 IST)
ಬೆಂಗಳೂರು: ಕಿಚ್ಚ ಸುದೀಪ್ ಅಭಿನಯದ ಬಹುಭಾಷಾ ಸಿನಿಮಾ ವಿಕ್ರಾಂತ್ ರೋಣನ ‘ಗುಮ್ಮ ಬಂದ ಗುಮ್ಮ’ ಸಾಂಗ್ ಇಂದು ರಿಲೀಸ್ ಆಗಿದೆ.

ಗುಮ್ಮ ಬಂದ ಗುಮ್ಮ ಎಂಬ ಹಿನ್ನಲೆ ಸಂಗೀತ ವಿಕ್ರಾಂತ್ ರೋಣ ಸಿನಿಮಾದ ಟ್ರೇಡ್ ಮಾರ್ಕ್ ಆಗಿದೆ. ಈ ಹಾಡಿಗಾಗಿ ಅಭಿಮಾನಿಗಳು ಕಾಯುತ್ತಿದ್ದರು. ಪವರ್ ಫುಲ್ ಸಾಂಗ್ ನಿರೀಕ್ಷೆಗೆ ತಕ್ಕಂತೇ ಅದ್ಭುತವಾಗಿದೆ.

ನಿರ್ದೇಶಕ ಅನೂಪ್ ಭಂಡಾರಿ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್, ಹರ್ಷಿಕಾ ದೇವನಾಥ್, ದೀಪಕ್ ಬ್ಲೂ ಹಾಡಿರುವ ಹಾಡು ಕನ್ನಡದಲ್ಲಿ ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ವ್ಯೂ ದಾಟಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ