ನನಗೆ ಆಗದವರು ಡ್ರಗ್ಸ್ ಪ್ರಕರಣದಲ್ಲಿ ಫಿಕ್ಸ್ ಮಾಡಿದ್ದಾರೆ: ರಾಗಿಣಿ ದ್ವಿವೇದಿ

ಸೋಮವಾರ, 7 ಸೆಪ್ಟಂಬರ್ 2020 (10:36 IST)
ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿ ಸಿಸಿಬಿ ಪೊಲೀಸರಿಗೆ ದೊಡ್ಡ ತಲೆಬಿಸಿಯಾಗಿದ್ದಾರೆ. ವಿಚಾರಣೆ ವೇಳೆ ತಾವು ಡ್ರಗ್ಸ್ ತೆಗೆದುಕೊಂಡಿರುವುದನ್ನು ಸ್ಪಷ್ಟವಾಗಿ ನಿರಾಕರಿಸುತ್ತಿದ್ದಾರೆ.


ನಾನೊಬ್ಬ ಸ್ಯಾಂಡಲ್ ವುಡ್ ಸ್ಟಾರ್ ನಟಿ. ನನಗೆ ಆಗದವರು ಪ್ರಕರಣದಲ್ಲಿ ಫಿಕ್ಸ್ ಆಗಿದ್ದಾರಷ್ಟೇ. ನಾನು ಡ್ರಗ್ಸ್ ತಗೊಂಡಿಲ್ಲ ಎಂದು ರಾಗಿಣಿ ಹೇಳುತ್ತಿದ್ದಾರೆ. ಆದರೆ ಅವರ ಆಪ್ತ ರವಿಶಂಕರ್ ರಾಗಿಣಿ ಡ್ರಗ್ಸ್ ಸೇವಿಸಿದ್ದರು ಎಂದಿದ್ದರು. ಆದರೆ ರಾಗಿಣಿ ತಪ್ಪೊಪ್ಪಿಕೊಂಡಿಲ್ಲ. ಇದು ಅವರ ಜಾಮೀನು ಅರ್ಜಿ ವಿಚಾರಣೆಗೆ ಸಹಕಾರಿಯಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ