ನಟಿ ರಾಗಿಣಿ ನಾಗಿಣಿ ಡ್ಯಾನ್ಸ್ ಫೋಟೋ ರಿಲೀಸ್

ಮಂಗಳವಾರ, 3 ಜನವರಿ 2017 (12:52 IST)
ಖ್ಯಾತ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ `ಉಪ್ಪು ಹುಳಿ ಖಾರ’. ಈ ಚಿತ್ರದ ವಿಶೇಷವಾದ ಹಾಡೊಂದರಲ್ಲೀಗ ರಾಗಿಣಿ ದ್ವಿವೇದಿ ಅವರು ಹೆಜ್ಜೆ ಹಾಕುವ ಮೂಲಕ ಸಂಚಲನ ಮೂಡಿಸಿದ್ದಾರೆ.
 
ಈ ಹಿಂದೆ ತುಪ್ಪ ಬೇಕಾ ತುಪ್ಪ, ಯಕ್ಕಾ ನಿನ್ ಮಗಳು ನಂಗೆ ಮುಂತಾದ ಎನರ್ಜಿಟಿಕ್ ಸಾಂಗ್‍ಗಳಲ್ಲಿ ಇಮ್ರಾನ್ ಸರ್ದಾರಿಯಾ ನೃತ್ಯ ಸಂಯೋಜನೆಯಲ್ಲಿ ರಾಗಿಣಿ ನಟಿಸಿದ್ದರು. ಆ ಹಾಡುಗಳೆಲ್ಲ ಹುಚ್ಚೆಬ್ಬಿಸಿದ್ದವು. ಇದೀಗ ತಮ್ಮದೇ ನಿರ್ದೇಶನದ ಚಿತ್ರದ ಹಾಡೊಂದರಲ್ಲಿ ನಟಿಸುವಂತೆ ಇಮ್ರಾನ್ ಸರ್ದಾರಿಯಾ ಅವರು ಕೇಳಿಕೊಂಡಾಗ ರಾಗಿಣಿ ಸಂತೋಷದಿಂದಲೇ ಒಪ್ಪಿ ಹೆಜ್ಜೆ ಹಾಕಿದ್ದಾರೆ.
 
ಗಿನ್ ಗಿನ್ ನಾಗಿನ್ ಚಾಚು ಚಾಚು ನಾಲಿಗೇನ, ದೋಚು ದೋಚು ನಶೆಯನ್ನ ಎಂಬ ಹಾಡಿನಲ್ಲಿ ರಾಗಿಣಿ ನಾಗಿಣಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಹಾಡೂ ಕೂಡಾ ಉಪ್ಪು ಹುಳಿ ಖಾರ ಚಿತ್ರದ ಪ್ರಮುಖ ಆಕರ್ಷಣೆಯಾಗಿ ಬಿಂಬಿತವಾಗಿದೆ.
 
ತೇಜಸ್ವಿನಿ ಎಂಟೆಪ್ರ್ರೈಸಸ್ ಅಡಿಯಲ್ಲಿ  ರಮೇಶ್ ರೆಡ್ಡಿ (ನಂಗ್ಲಿ) ನಿರ್ಮಾಣ ಮಾಡುತ್ತಿರುವ `ಉಪ್ಪು ಹುಳಿ ಖಾರ' ಸಿನಿಮಾದ ಛಾಯಾಗ್ರಾಹಣ ನಿರಂಜನ್ ಬಾಬು ಅವರದು. `ಉಪ್ಪು ಹುಳಿ ಖಾರ' ಚಿತ್ರಕ್ಕೆ ಮೂವರು ಸಂಗೀತ ನಿರ್ದೇಶಕರುಗಳು. 
 
ಜೂಡೋ ಸ್ಯಾಂಡಿ ಅವರು ಮೂರು ಹಾಡುಗಳನ್ನು, ಕಿಶೋರ್ ಹಾಗೂ ಪ್ರಜ್ವಲ್ ಪೈ ಅವರು ತಲಾ ಒಂದು ಹಾಡುಗಳಿಗೆ ರಾಗ ಸಂಯೋಜನೆ ಮಾಡಿಜದ್ದಾರೆ. ತಾರಾಗಣದಲ್ಲಿ ಮಾಲಾಶ್ರೀ ಅವರ ಸ್ಪೆಷಲ್ ಪಾತ್ರದ ಜೊತೆಗೆ ಅನುಶ್ರೀ, ಜಯಶ್ರೀ, ಮಾಷ (ಉಕ್ರೈನ್ ದೇಶದ ನಟಿ), ಶರತ್, ಧನಂಜಯ್, ಶಶಿ ಹಾಗೂ ಇನ್ನಿತರ ಹೊಸಬರ ದಂಡೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ