ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆಯನ್ನು ನಾಳೆಗೆ ಮುಂದೂಡಲಾಗಿದೆ.
ಇಬ್ಬರೂ ನಟಿಮಣಿಯರು ಸದ್ಯಕ್ಕೆ ನ್ಯಾಯಾಂಗ ಬಂಧನ ಅವಧಿಯ ಹಿನ್ನಲೆಯಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ನಾಳೆ ಅವರ ಜಾಮೀನು ಅರ್ಜಿ ತೀರ್ಮಾನವಾಗುವ ಸಾಧ‍್ಯತೆಯಿದೆ. ಹೀಗಾಗಿ ನಾಳೆ ಇಬ್ಬರಿಗೂ ಬಂಧನ ಮುಂದುವರಿಯುತ್ತದೋ ಅಥವಾ ಮನೆಗೆ ಹೋಗಲು ಅವಕಾಶ ಸಿಗುತ್ತದೋ ಕಾದು ನೋಡಬೇಕಿದೆ.