ವಿವಾಹ ವಾರ್ಷಿಕೋತ್ಸವಕ್ಕೆ ಪತ್ನಿಯ ಬಗ್ಗೆ ಭಾವುಕ ವಿಡಿಯೋ ಹಂಚಿಕೊಂಡ ವಿಜಯ್ ರಾಘವೇಂದ್ರ
ವಿಜಯ್ ಮತ್ತು ಸ್ಪಂದನಾ ವೈವಾಹಿಕ ಬದುಕಿಗೆ 16 ವರ್ಷಗಳಾಗಿರುವ ಹಿನ್ನಲೆಯಲ್ಲಿ ರಾಘು ವಿಡಿಯೋವೊಂದನ್ನು ಹಂಚಿಕೊಂಡು ಪತ್ನಿಗೆ ಕಾವ್ಯ ಸಂದೇಶವೊಂದನ್ನು ಬರೆದಿದ್ದಾರೆ.
ಚಿನ್ನಾ.. ಇಣುಕು ನೋಟ ಬೀರಿ ಹೋದೆ ಬದುಕಿನ ಅಂಗಳದಲಿ
ಎಲ್ಲೆ ಮೀರಿ ಒಲವ ನೀಡಿದ ಎದೆಯ ಅಂತರಾಳದಲಿ
ಬದುಕನ್ನು ಕಟ್ಟಿ ಸರ್ವಸ್ವವಾದೆ
ಉಸಿರಲ್ಲಿ ಬೆರೆತು ಜೀವಂತವಾದೆ
ಮುದ್ದಾದ ನಗುವಿನಲ್ಲಿದ್ದಿದ್ದ ಶಕ್ತಿ ಪರ್ವತದಷ್ಟು
ಮರೆಯದೆ… ತೊರೆಯದೆ ಎದೆಗೊತ್ತಿ ಪ್ರೀತಿಸುವೆ
ಶೌರ್ಯನಲ್ಲಿ ನಾನಿನ್ನ ಬಿಗಿದಪ್ಪುವಷ್ಟು..
ಎಂಬ ಭಾವುಕ ಸಾಲುಗಳನ್ನು ಮದುವೆ ವಾರ್ಷಿಕೋತ್ಸವದ ಅಂಗವಾಗಿ ಪತ್ನಿ ಸ್ಪಂದನಾಗೆ ಬರೆದಿದ್ದಾರೆ ವಿಜಯ್ ರಾಘವೇಂದ್ರ. ಅವರ ಈ ಸಾಲುಗಳು ಅನೇಕರ ಕಣ್ಣಂಚು ಒದ್ದೆ ಮಾಡಿದೆ.