ಬಾಕ್ಸ್ ಆಫೀಸ್ ನಲ್ಲಿ ಗುದ್ದಾಡಲಿದ್ದಾರೆ ಗೆಳೆಯರಾದ ರಾಜ್ ಬಿ ಶೆಟ್ಟಿ, ರಕ್ಷಿತ್ ಶೆಟ್ಟಿ
ರಾಜ್ ಬಿ ಶೆಟ್ಟಿಯವರ ಟೋಬಿ ಸಿನಿಮಾ ಆಗಸ್ಟ್ 25 ರಂದು ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ. ಈಗಾಗಲೇ ಪೋಸ್ಟರ್ ಮೂಲಕ ಸಿನಿಮಾ ಎಲ್ಲರ ಗಮನ ಸೆಳೆಯುತ್ತಿದೆ.
ಇದೇ ಸಮಯಕ್ಕೆ ಅಂದರೆ ಒಂದು ವಾರದ ನಂತರ ರಕ್ಷಿತ್ ಶೆಟ್ಟಿ ನಾಯಕರಾಗಿರುವ ಸಪ್ತಸಾಗರದಾಚೆ ಎಲ್ಲೊ ಸಿನಿಮಾ ಥಿಯೇಟರ್ ನಲ್ಲಿ ರಿಲೀಸ್ ಆಗಲಿದೆ. ಸೆಪ್ಟೆಂಬರ್ 1 ರಂದು ಈ ಸಿನಿಮಾ ತೆರೆಗೆ ಬರುತ್ತಿದೆ. ಗೆಳೆಯರಿಬ್ಬರ ಸಿನಿಮಾ ರಿಲೀಸ್ ಗೆ ಕೇವಲ 1 ವಾರದ ಗ್ಯಾಪ್ ಅಷ್ಟೇ ಇದೆ. ಹೀಗಾಗಿ ಬಾಕ್ಸ್ ಆಫೀಸ್ ನಲ್ಲಿ ಇಬ್ಬರ ಸಿನಿಮಾವೂ ಪೈಪೋಟಿ ನಡೆಸುವುದು ಖಚಿತ.
ಎರಡೂ ಸಿನಿಮಾಗಳೂ ಬೇರೆ ಬೇರೆ ರೀತಿಯ ಕತೆ, ಶೇಡ್ ನ ಸಿನಿಮಾಗಳಾಗಿರುವುದರಿಂದ ಕ್ಲ್ಯಾಶ್ ಆಗದು ಎನ್ನುವುದು ರಾಜ್ ಬಿ ಶೆಟ್ಟಿ ಅಭಿಪ್ರಾಯ.