ಬಾಹುಬಲಿ-2 ಚಿತ್ರದ ಆಡಿಯೋ ಲಾಂಚ್ ವೇಳೆ ಗಳಗಳನೆ ಅತ್ತ ರಾಜಮೌಳಿ

ಸೋಮವಾರ, 27 ಮಾರ್ಚ್ 2017 (18:25 IST)
ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ ಬರೆದ ಚಿತ್ರ ಬಾಹುಬಲಿ. ಇದೀಗ, ಬಾಹುಬಲಿ-2 ಸಹ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈ ಐತಿಹಾಸಿಕ ಚಿತ್ರದ ಆಡಿಯೋ ಲಾಂಚ್ ಅದ್ದೂರಿ ಕಾರ್ಯಕ್ರಮ ನಿನ್ನೆ ಹೈದರಾಬಾದ್`ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯಿತು.

ಈ ಅದ್ಬುತ ಚಿತ್ರದ ರೂವಾರಿ ನಿರ್ದೇಶಕ ರಾಜಮೌಳಿ. 2 ಚಿತ್ರಗಳಿಗಾಗಿ ರಾಜಮೌಳಿ ಸತತ 5 ವರ್ಷ ಶ್ರಮಿಸಿದ್ದಾರೆ. ನಿನ್ನೆ ಅವರ ಸಾಧನೆಗೂ ಒಂದು ಹಾಡಿನ ಪ್ರಶಂಸೆಯೂ ಸಿಕ್ಕಿತ್ತು. ಸಂಗೀತ ನಿರ್ದೇಶಕ ಎಂ..ಎಂ. ಕೀರವಾಣಿ ರಾಜಮೌಳಿಯವರಿಗಾಗಿಯೇ ವಿಶಿಷ್ಟ ಹಾಡೊಂದನ್ನ ಸ್ಟೇಜ್ ಪರದೆ ಮೇಲೆ ಪ್ರಸಾರ ಮಾಡಿದರು. ಸ್ಟೇಜ್ ಮೇಲೆ ಬಂದ ರಾಜಮೌಳಿಗೆ ದುಃಖ ಉಮ್ಮಳಿಸಿ ಬಂತು. ಹಾಡಿನ ಮಧ್ಯೆಯೇ ಗಳಗಳನೆ ಅಳುತ್ತಾ ಸ್ಟೇಜ್`ನಿಂದ ಹೊರನಡೆದರು. 


ವೆಬ್ದುನಿಯಾವನ್ನು ಓದಿ