ಚೆನ್ನೈ: ಕಮಲ್ ಹಾಸನ್ ತಮ್ಮ ಬರ್ತ್ ಡೇ ದಿನ ರಾಜಕೀಯ ಜೀವನಕ್ಕೆ ಮುನ್ನಡಿಯಾಗಿ ಮೊಬೈಲ್ ಆಪ್ ಬಿಡುಗಡೆ ಮಾಡಿದ್ದಾಯ್ತು. ಇದೀಗ ಸೂಪರ್ ಸ್ಟಾರ್ ರಜನೀಕಾಂತ್ ತಮ್ಮ ಬರ್ತ್ ಡೇಗೆ ರಾಜಕೀಯ ಪ್ರವೇಶದ ಬಗ್ಗೆ ಘೋಷಣೆ ಮಾಡುತ್ತಾರೆ ಎಂಬ ಸುದ್ದಿ ಹಬ್ಬಿದೆ.
ಡಿ.12 ರಂದು ಜನ್ಮ ದಿನ ಆಚರಿಸಿಕೊಳ್ಳಲಿರುವ ರಜನಿ ಅದೇ ದಿನ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸ್ಪಷ್ಟ ನಿರ್ಧಾರ ಹೊರಹಾಕಲಿದ್ದಾರೆ ಎಂದು ಲೆಕ್ಕಾಚಾರ ಹಾಕಲಾಗಿದೆ.
ರಜನೀಕಾಂತ್ ಕೂಡಾ ಕಮಲ್ ಹಾಸನ್ ರಂತೆ ಯಾವುದೇ ರಾಜಕೀಯ ಪಕ್ಷ ಸೇರದೇ ತಮ್ಮದೇ ಹೊಸ ಪಕ್ಷ ಸ್ಥಾಪಿಸಲು ಉತ್ಸುಕರಾಗಿರುವುದಾಗಿ ತಿಳಿದುಬಂದಿದೆ. ದೈವ ಭಕ್ತರಾಗಿರುವ ರಜನಿ ಬಲಪಂಥೀಯ ವಿಚಾರಧಾರೆಯ ಪಕ್ಷ ಸ್ಥಾಪಿಸಬಹುದು ಎಂದು ಅಂದಾಜಿಸಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ