ನಟ ಸೂರ್ಯ ಹುಟ್ಟುಹಬ್ಬದ ಆಚರಣೆಯಲ್ಲಿ ಜೀವ ಕಳೆದುಕೊಂಡ ಇಬ್ಬರು ಅಭಿಮಾನಿಗಳು

ಸೋಮವಾರ, 24 ಜುಲೈ 2023 (09:33 IST)
Photo Courtesy: Twitter
ಚೆನ್ನೈ: ತಮಿಳು ಸ್ಟಾರ್ ನಟ ಸೂರ್ಯ ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ಆದರೆ ಅವರ ಹುಟ್ಟುಹಬ್ಬ ಆಚರಣೆಯಲ್ಲಿ ತೊಡಗಿಸಿಕೊಂಡಿದ್ದ ಇಬ್ಬರು ಅಭಿಮಾನಿಗಳು ಪ್ರಾಣ ಕಳೆದುಕೊಂಡ ಧಾರುಣ ಘಟನೆ ನಡೆದಿದೆ.

ಆಂಧ್ರಪ್ರದೇಶದ ಪಾಲ್ನಾಡು ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ದ್ವಿತೀಯ ವರ್ಷದ ಪದವಿ ಓದುತ್ತಿದ್ದ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿದ್ದಾರೆ. ಸೂರ್ಯ ಅವರ ಬ್ಯಾನರ್ ಗೆ ಹಾಕಲಾಗಿದ್ದ ಬ್ಯಾನರ್ ಗೆ ತಾಕಿದ್ದ ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸಾವನ್ನಪ್ಪಿದ್ದಾರೆ.

ನಕ್ಕಾ ವೆಂಕಟೇಶ್ ಮತ್ತು ಪೊಲುರಿ ಸಾಯಿ ಎಂಬ ಯುವಕರು ಸಾವನ್ನಪ್ಪಿದ್ದವರು. ಇವರು ನಟ ಸೂರ್ಯ ಅವರ ಕಟ್ಟಾ ಅಭಿಮಾನಿಗಳು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ