ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಬಸ್ ಡ್ರೈವರ್ ಗೆ ಅರ್ಪಿಸಿದ ರಜನೀಕಾಂತ್

ಸೋಮವಾರ, 25 ಅಕ್ಟೋಬರ್ 2021 (13:52 IST)
ನವದೆಹಲಿ: ಸಿನಿಮಾ ರಂಗದಲ್ಲಿನ ಶ್ರೇಷ್ಠ ಸಾಧನೆಗಾಗಿ ಕೊಡಮಾಡುವ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಆಯ್ಕೆಯಾಗಿರುವ ಸೂಪರ್ ಸ್ಟಾರ್ ರಜನೀಕಾಂತ್ ಇಂದು ದೆಹಲಿಯಲ್ಲಿ ನಡೆದ 67 ನೇ ರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಶಶ್ತಿ ಸ್ವೀಕರಿಸಿದರು.

ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಂದ ಪ್ರಶಸ್ತಿ ಸ್ವೀಕರಿಸಿದ ತಲೈವಾ ರಜನಿ ಬಳಿಕ ಪ್ರಶಸ್ತಿಯನ್ನು ತಮ್ಮ ಕಲಾ ಜೀವನ ರೂಪಿಸಲು ನೆರವಾದವರಿಗೆ ಅರ್ಪಿಸಿದ್ದಾರೆ. ತಮ್ಮ ಮೆಂಟರ್, ನಿರ್ದೇಶಕ ಕೆ. ಬಾಲಚಂದರ್, ಸಹೋದರ ಸತ್ಯನಾರಾಯಣ ಗಾಯಕ್ ವಾಡ್ ಮತ್ತು ಕೆಎಸ್ ಆರ್ ಟಿಸಿ ಬಸ್ ಚಾಲಕರಾಗಿದ್ದ, ಸ್ನೇಹಿತ ರಾಜ ಬಹದ್ದೂರ್ ಗೆ ಪ್ರಶಸ್ತಿ ಅರ್ಪಣೆ ಎಂದಿದ್ದಾರೆ.

ರಜನಿ ನಟನಾಗುವ ಮೊದಲು ಕೆಎಸ್ ಆರ್ ಟಿಸಿ ಬಸ್ ನಲ್ಲಿ ನಿರ್ವಾಹಕನಾಗಿ ಕೆಲವು ಸಮಯ ಕೆಲಸ ಮಾಡಿದ್ದರು. ಹೀಗಾಗಿ ಈ ಸಂದರ್ಭದಲ್ಲಿ ತಮ್ಮ ಸ್ನೇಹಿತ, ಬಸ್ ಚಾಲಕರಾಗಿದ್ದ ರಾಜ್ ಬಹದ್ದೂರ್ ರನ್ನು ನೆನೆಸಿಕೊಂಡಿದ್ದಾರೆ. ನನ್ನಲ್ಲಿ ಕಲಾವಿದನಿದ್ದಾನೆ ಎಂದು ಗುರುತಿಸಿದವನು ರಾಜ್ ಬಹದ್ದೂರ್ ಎಂದು ರಜನಿ ಈ ಸಂದರ್ಭದಲ್ಲಿ ಸ್ಮರಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ