ಪುನೀತ್ ಗೆ ಕರ್ನಾಟಕ ರತ್ನ ಕಾರ್ಯಕ್ರಮಕ್ಕೆ ರಜನೀಕಾಂತ್ ಗೆ ಆಹ್ವಾನ
ಈ ಕಾರ್ಯಕ್ರಮ ವಿಧಾನಸೌಧದ ಮಹಾಧ್ವಾರದ ಮೆಟ್ಟಿಲುಗಳ ಮೇಲೆ ವೇದಿಕೆಯಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ರಾಜ್ಯ ಸರ್ಕಾರವೇ ಆಯೋಜಿಸುತ್ತಿದೆ.
ಸಾರ್ವಜನಿಕರಿಗೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮುಖ್ಯಮಂತ್ರಿಗಳು ಆಹ್ವಾನ ನೀಡಿದ್ದಾರೆ. ಇದರ ಜೊತೆಗೆ ಗಣ್ಯಾತಿಗಣ್ಯರನ್ನು ಸರ್ಕಾರವೇ ಆಹ್ವಾನಿಸುತ್ತಿದೆ. ಡಾ. ರಾಜ್ ಕುಟುಂಬ, ಕನ್ನಡ ಚಿತ್ರರಂಗದ ದಿಗ್ಗಜರ ಜೊತೆಗೆ ಸೂಪರ್ ಸ್ಟಾರ್ ರಜನೀಕಾಂತ್, ಜ್ಯೂ.ಎನ್ ಟಿಆರ್ ಗೂ ವಿಶೇಷ ಆಹ್ವಾನ ನೀಡಲಾಗಿದೆ.