ಹುಲಿವೇಷಕ್ಕೆ ಅವಮಾನ ಮಾಡಿದ್ದರಾ ರಕ್ಷಿತ್ ಶೆಟ್ಟಿ?!

ಗುರುವಾರ, 27 ಅಕ್ಟೋಬರ್ 2022 (08:20 IST)
ಬೆಂಗಳೂರು: ಹೆಡ್ ಬುಷ್ ಸಿನಿಮಾದಲ್ಲಿ ಡಾನ್ ಜಯರಾಜ್ ಪಾತ್ರಧಾರಿ ಡಾಲಿ ಧನಂಜಯ್ ವೀರಗಾಸೆ ವೇಷಧಾರಿಗೆ ಹೊಡೆಯುವ ದೃಶ್ಯ ವಿವಾದಕ್ಕೆ ಕಾರಣವಾಗಿರುವ ಬೆನ್ನಲ್ಲೇ ರಕ್ಷಿತ್ ಶೆಟ್ಟಿ ಬಗ್ಗೆ ನೆಟ್ಟಿಗರೊಬ್ಬರು ಆರೋಪ ಮಾಡಿದ್ದಾರೆ.

ರಕ್ಷಿತ್ ಶೆಟ್ಟಿಗೆ ಖ್ಯಾತಿ ತಂದುಕೊಟ್ಟ ಸಿನಿಮಾ ಉಳಿದವರು ಕಂಡಂತೆ. ಈ ಸಿನಿಮಾದಲ್ಲಿ ರಕ್ಷಿತ್ ಹುಲಿವೇಷಧಾರಿಗೆ ಹೊಡೆಯುವ ದೃಶ್ಯವಿದೆ. ಹೀಗಾಗಿ ಇದು ಹಿಂದೂಗಳ ಭಾವನೆಗೆ ಧಕ್ಕೆ ತಂದಂತೆ ಆಗಿಲ್ಲವೇ ಎಂದು ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ.

ಕೆಲವು ದಿನಗಳ ಹಿಂದೆ ಕಾಂತಾರ ಸಿನಿಮಾ ಭೂತಕೋಲ ವಿಚಾರ ಚರ್ಚೆಗೆ ಗ್ರಾಸವಾಗಿತ್ತು. ಈಗ ಹೆಡ್ ಬುಷ್ ಸಿನಿಮಾವನ್ನು ಕಲೆ, ಸಂಸ್ಕೃತಿಗೆ ಅವಮಾನ ಮಾಡಲಾಗಿದೆ ಎಂದು ವಿವಾದಕ್ಕೆ ಕಾರಣವಾಗಿದೆ. ಒಟ್ಟಾರೆ ಇತ್ತೀಚೆಗೆ ಕನ್ನಡ ಸಿನಿಮಾಗಳು ವಿವಾದಗಳಿಂದಲೂ ಸುದ್ದಿಯಾಗುವಂತಾಗಿದೆ.

-Edited by Rajesh Patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ