ಹೆಡ್ ಬುಷ್ ವಿವಾದ: ಡಾಲಿ ಧನಂಜಯ್ ಪರ ಅಭಿಮಾನಿಗಳ ಅಭಿಯಾನ

ಬುಧವಾರ, 26 ಅಕ್ಟೋಬರ್ 2022 (16:55 IST)
ಬೆಂಗಳೂರು: ಹೆಡ್ ಬುಷ್ ಸಿನಿಮಾದಲ್ಲಿ ವೀರಗಾಸೆಗೆ ಅವಮಾನ ಮಾಡಲಾಗಿದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ನಟ, ನಿರ್ಮಾಪಕ ಡಾಲಿ ಧನಂಜಯ್ ಗೆ ಅಭಿಮಾನಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ.

ದೃಶ್ಯವೊಂದರಲ್ಲಿ ವೀರಗಾಸೆ ವೇಷ ಹಾಕಿರುವ ವ್ಯಕ್ತಿಗೆ ಡಾಲಿ ಧನಂಜಯ್ ಹೊಡೆಯುವ ದೃಶ್ಯವಿತ್ತು. ಇದು ವಿವಾದಕ್ಕೆ ಕಾರಣವಾಗಿದೆ. ಸೋಷಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಇದರ ಬೆನ್ನಲ್ಲೇ ಇದೀಗ ಧನಂಜಯ್ ಪರವಾಗಿ ಅವರ ಅಭಿಮಾನಿಗಳು ಟ್ವಿಟರ್ ನಲ್ಲಿ ನಾವು ಧನಂಜಯ್ ಜೊತೆಗಿದ್ದೇವೆ ಎಂದು ಅಭಿಯಾನ ನಡೆಸಿದ್ದಾರೆ.


-Edited by Rajesh patil

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ