ವಿಜಯ್ ರಾಘವೇಂದ್ರ ನಟನೆಯ 'ಸ್ವಪ್ನ ಮಂಟಪ' ಶೂಟಿಂಗ್ ಮುಕ್ತಾಯ

Sampriya

ಬುಧವಾರ, 15 ಮೇ 2024 (18:29 IST)
photo Courtesy Instagram
ಬೆಂಗಳೂರು:  ನಟ ವಿಜಯ್ ರಾಘವೇಂದ್ರ ಹಾಗೂ ಕನ್ನಡತಿ ಸೀರಿಯಲ್ ಖ್ಯಾತಿಯ ರಂಜನಿ ರಾಘವನ್ ಅವರ ನಟನೆಯ ಸ್ವಪ್ನ ಮಂಟಪ ಸಿನಿಮಾ ಶೂಟಿಂಗ್ ಹಾಗೂ ಡಬ್ಬಿಂಗ್ ಕೆಲಸಗಳನ್ನು ಮುಗಿಸಿದೆ.

ಮೈಸೂರಿನ ಬಾಬುನಾಯ್ಕ್ ಅವರು ತಮ್ಮ ಮಲೈಮಹದೇಶ್ವರ ಎಂಟರ್ ಪ್ರೈಸಸ್ ಸಂಸ್ಥೆಯಿಂದ 'ಸ್ವಪ್ನಮಂಟಪ' ಎಂಬ ನಿರ್ಮಾಣ ಮಾಡಲಾಗುತ್ತಿದೆ. ಈ ಸಿನಿಮಾಗೆ ಬರಗೂರು ರಾಮಚಂದ್ರಪ್ಪನವರ ಅದೇ ಹೆಸರಿನ ಕಾದಂಬರಿಯನ್ನು ಆಧರಿಸಿದೆ. ಈ ಚಿತ್ರಕ್ಕೆ ಬರಗೂರು ರಾಮಚಂದ್ರಪ್ಪನವರೇ ಚಿತ್ರಕತೆ, ಸಂಭಾಷಣೆ, ಗೀತರಚನೆ ಮಾಡಿ ನಿರ್ದೇಶನ ಮಾಡಿದ್ದಾರೆ.

ಇನ್ನೂ ವಿಶೇಷ ಎಂದರೆ ಈ ಚಿತ್ರದಲ್ಲಿ ವಿಜಯ್ ರಾಘವೇಂಧ್ರ ಹಾಗೂ ರಂಜನಿ ಅವರು ದ್ವಿಪಾತ್ರಗಳಲ್ಲಿ ಅಭಿನಸುತ್ತಿದ್ದಾರೆ.

ಸುಂದರರಾಜ್, ಶೋಭಾರಾಘವೇಂದ್ರ, ರಜನಿ, ಮಹಾಲಕ್ಷ್ಮೀ, ಸುಂದರರಾಜ ಅರಸು, ರಾಜಪ್ಪದಳವಾಯಿ, ಅಂಬರೀಶ ಸಾರಂಗಿ, ಮೈಸೂರು ಮಂಜುಳ, ಉಮ್ಮತ್ತೂರು ಬಸವರಾಜು, ವೆಂಕಟರಾಜು, ಶಿವಲಿಂಗಪ್ರಸಾದ್, ಭಾರತಿರಮೇಶ್, ಗುಂಡಿ ರಮೇಶ್ ಸೇರಿದಂತೆ ದೊಡ್ಡ ತಾರಾ ಬಳಗವಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ