ಚಾರ್ಲಿಯ ಟಾರ್ಚರ್ ಹಾಡು ಲಾಂಚ್ ಮಾಡಲು ಮುಂದಾದ ರಕ್ಷಿತ್ ಶೆಟ್ಟಿ ಆಂಡ್ ಟೀಂ’

ಮಂಗಳವಾರ, 31 ಆಗಸ್ಟ್ 2021 (08:55 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ‘ಚಾರ್ಲಿ 777’ ಸಿನಿಮಾದ ಬಗ್ಗೆ ಚಿತ್ರ ತಂಡ ಹೊಸ ಅಪ್ ಡೇಟ್ ಕೊಟ್ಟಿದೆ.


ಸೆಪ್ಟೆಂಬರ್ 9 ರಂದು ಚಿತ್ರದ ಮೊದಲ ಹಾಡು ಬಿಡುಗಡೆ ಮಾಡಲು ಚಿತ್ರತಂಡ ತೀರ್ಮಾನಿಸಿದೆ. ಚಾರ್ಲಿ ಮತ್ತು ಧರ್ಮನ ಟಾರ್ಚರ್ ಹಾಡು ನೋಡಲು ಸಿದ್ಧರಾಗಿ ಎಂದು ಚಿತ್ರತಂಡ ಪ್ರಕಟಣೆ ನೀಡಿದೆ.

ಈ ಸಿನಿಮಾದಲ್ಲಿ ರಕ್ಷಿತ್ ಜೊತೆಗೆ ನಾಯಿಯೂ ಪ್ರಮುಖ ಪಾತ್ರವಹಿಸಿದೆ. ಇವರಿಬ್ಬರ ತುಂಟಾಟ, ತರ್ಲೆಗಳನ್ನು ಈ ಹಾಡಿನಲ್ಲಿ ನೋಡಬಹುದಂತೆ. ಈ ಹಾಡು ಸಖತ್ ಎಂಟರ್ ಟೈನ್ ಮೆಂಟ್ ಕೊಡಲಿದೆ ಎಂದು ಚಿತ್ರತಂಡ ಭರವಸೆ ನೀಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ