ಡ್ರೋಣ್ ಪ್ರತಾಪ್ ನನ್ನ ತಮ್ಮ ಎಂದ ಒಳ್ಳೆ ಹುಡುಗ ಪ್ರಥಮ್ ಟ್ರೋಲ್

ಸೋಮವಾರ, 30 ಆಗಸ್ಟ್ 2021 (09:56 IST)
ಬೆಂಗಳೂರು: ಡ್ರೋಣ್ ಪ್ರತಾಪ್ ಬಗ್ಗೆ ಸಿನಿಮಾ ಮಾಡಲು ಹೊರಟಿರುವ ಒಳ್ಳೆ ಹುಡುಗ ಪ್ರಥಮ್ ಈಗ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.


ಡ್ರೋಣ್ ಪ್ರತಾಪ್ ಜೊತೆಯಾಗಿರುವ ಫೋಟೋ ಪ್ರಕಟಿಸಿಕೊಂಡು ಇವನು ಇನ್ಮೇಲೆ ನನ್ನ ತಮ್ಮ ಎಂದು ಪ್ರಥಮ್ ಹೊಗಳಿದ್ದೇ ಹೊಗಳಿದ್ದು. ಇದಕ್ಕೆ ನೆಟ್ಟಿಗರು ಅವರನ್ನು ಟ್ರೋಲ್ ಮಾಡಿದ್ದಾರೆ.

ಅವನು ಡ್ರೋಣ್ ವಿಜ್ಞಾನಿ ಎಂದು ರೈಲು ಬಿಟ್ಟ, ನೀವು ಮಾತಿನಲ್ಲೇ ಮಂಟಪ ಕಟ್ಟುತ್ತೀರಿ. ಸರಿಯಾಗಿದೆ ಜೋಡಿ ಎಂದು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ಇನ್ನು, ಕೆಲವರು ಇಂಥವರ ಬಗ್ಗೆ ಸಿನಿಮಾ ಮಾಡಿ ನಿಮ್ಮ ಗೌರವ ಕಳೆದುಕೊಳ್ಳಬೇಡಿ ಎಂದು ಕಾಮೆಂಟ್ ಮಾಡಿದ್ದಾರೆ. ಡ್ರೋಣ್ ಪ್ರತಾಪ್ ಯುವ ವಿಜ್ಞಾನಿ ಎಂದು ಹೇಳಿಕೊಂಡು ಪಂಗನಾಮ ಹಾಕಿದ್ದ ಎಂಬ ಆರೋಪವಿದೆ. ಆದರೆ ಈಗ ಪ್ರಥಮ್ ಅವರ ಬಗ್ಗೆಯೇ ಸಿನಿಮಾ ಮಾಡಲು ಹೊರಟಿರುವುದರಿಂದ ಟ್ರೋಲಿಗರ ಬಾಯಿಗೆ ಆಹಾರವಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ