ರಕ್ಷಿತ್ ಶೆಟ್ಟಿ ಮುಖದ ತುಂಬಾ ಗಾಯದ ಕಲೆ! ಭೀಕರ ಅವತಾರಕ್ಕೆ ಬೆಚ್ಚಿದ ಫ್ಯಾನ್ಸ್

ಬುಧವಾರ, 25 ಮೇ 2022 (10:00 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಈ ವರ್ಷವಿಡೀ ಅಭಿಮಾನಿಗಳಿಗೆ ರಸದೌತಣ ನೀಡಲು ರೆಡಿಯಾಗಿದ್ದಾರೆ. ಮೊನ್ನೆಯಷ್ಟೇ ಸಪ್ತಸಾಗರದಾಚೆ ಎಲ್ಲೊ ಪೋಸ್ಟರ್ ಬಿಡುಗಡೆ ಮಾಡಿದ್ದ ಚಿತ್ರತಂಡ ರಕ್ಷಿತ್ 10 ವರ್ಷಗಳ ಬಳಿಕ ಹೇಗಿರ್ತಾರೆ ಎಂದು ತೋರಿಸಿಕೊಟ್ಟಿತ್ತು.

ಆ ಪೋಸ್ಟರ್ ನೋಡಿಯೇ ಫ್ಯಾನ್ಸ್ ರಕ್ಷಿತ್ ಲುಕ್ ನೋಡಿಯೇ ಅದ್ಭುತ ಎಂದು ಕೊಂಡಾಡಿದ್ದರು. ಇದೀಗ ರಕ್ಷಿತ್ ಈ ಪೋಸ್ಟರ್ ಗಾಗಿ ಮಾಡಿದ್ದ ಫೋಟೋ ಶೂಟ್ ನ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.

ಈ ಫೋಟೋದಲ್ಲಿ ರಕ್ಷಿತ್ ಮುಖದ ತುಂಬಾ ಗಾಯದ ಕಲೆಯಿದ್ದು ಭೀಭತ್ಸವಾಗಿದೆ. ಫೋಟೋ ನೋಡಿದ ನೆಟ್ಟಿಗರು ಭಯ ವ್ಯಕ್ತಪಡಿಸಿದ್ದಾರೆ. ಸದ್ಯಕ್ಕೆ ನಾವು ಚಾರ್ಲಿ 777 ಮೂಡ್ ನಲ್ಲಿದ್ದೇವೆ. ಇಂತಹ ಫೋಟೋ ಹಾಕಿ ನಮ್ಮ ಮೂಡ್ ಬದಲಾಯಿಸಬೇಡಿ ಎಂದು ಸಣ್ಣ ಸಲಹೆಯನ್ನೂ ಕೊಟ್ಟಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ